Thursday, August 18, 2011

HAPPY FRIENDSHIP DAY

ಒಂದೊಂದ್ ಸಲ ಫ್ರೆಂಡ್, friendship ಅನ್ನೋ ಪದಕ್ಕೆ ಅರ್ಥಾನೆ ಇಲ್ಲ ಅನ್ಸತ್ತೆ ...ಎಷ್ಟು ಒಳ್ಳೆ ಫ್ರೆಂಡ್, bestest  ಫ್ರೆಂಡ್ ಅಂತೆಲ್ಲ ಅನ್ಕೊಂಡಿರ್ತಿವಿ...ಆದ್ರೆ ಅವ್ರು ನಮ್ಮನ್ನ ಅರ್ಥಾನೆ ಮಾಡ್ಕೊಂಡಿರಲ್ಲ .... friendship ಅಂದ್ರೆ ಏನು??? ಬೇರೆಯವರಿಗೆ hurt ಮಾಡೋದಾ??? ಬೇರೆಯವರ ಭಾವನೆಗಳಿಗೆ ಏನು ಬೆಲೆನೇ ಇಲ್ವಾ? ತಪ್ಪು ಯಾರದೇ ಇರಲಿ ಬೇರೆಯವರ ಭಾವನೆಗಳನ್ನ ಅರ್ಥ ಮಾಡ್ಕೊಳೋದು ಕಲಿಬೇಕು..ಅಲ್ವ?? anyhow , ನಾನ್ ಯಾಕೋ ನನ್ bestest ಫ್ರೆಂಡ್ ನ ಕಳ್ಕೊತಿದಿನಿ ಅಂತ ಅನ್ಸ್ತಿದೆ....ಲೈಫ್ ಅಲ್ಲಿ ಬೆಸ್ಟ್ ಫ್ರೆಂಡ್ ಸಿಗೋದು ತುಂಬಾ ಕಷ್ಟ ...ಅದ್ರಲ್ಲಿ ಸಿಕ್ಕಿರೋ ಫ್ರೆಂಡ್ ನ ಕಳ್ಕೊಳೋದು ನಂಗೂ ಇಷ್ಟ ಇಲ್ಲ ...ಆದ್ರೆ ಅವ್ರ ಬೆಲೆ ನಮಗೆ ಅರ್ಥ ಆಗೋದು ದೂರ  ಇದ್ದಾಗಲೇ ಅನ್ಸತ್ತೆ...ದೂರ ಆದಮೇಲೂ ಆ friendship ಉಳ್ಕೊಂಡಿದ್ರೆ ಅದು pure friendship ಅಂತ ನನ್ ಭಾವನೆ....ನೀವ್ ಏನ್ ಅಂತಿರ???.....:)

Anyhow , ಏಲ್ಲರಿಗೂ HAPPY  FRIENDSHIP DAY .....ನಿಮ್ ನಿಮ್ ಫ್ರೆಂಡ್ಸ್ ಭಾವನೆಗಳನ್ನ  ಅರ್ಥ ಮಾಡ್ಕೊಳಿ ...... Bcoz , ಏಲ್ಲರಿಗೂ ಒಳ್ಳೆ ಫ್ರೆಂಡ್ ಸಿಗಲ್ಲ..By chance ಸಿಕ್ಕಿದರೂ  ಒಂದ್ ಸಲ ಮಿಸ್ ಆದ್ರೆ ಆ ಫ್ರೆಂಡ್ ಮತ್ತೆ ಸಿಗಲ್ಲ.... :)

Friday, April 8, 2011

ಒಂದು ಚಿಕ್ಕ Gapನ ನಂತರ ......:)

Oh My God !!!!!!!!!!!! ನಾನು ನನ್ ಬ್ಲಾಗ್ ಅಲ್ಲಿ ನಾಲ್ಕು ತಿಂಗಳ  ನಂತರ ಬರೀತಾ ಇದೀನಿ ಅಂದ್ರೆ  ಲೈಫ್ ಅಲ್ಲಿ ಎಷ್ಟು busy ಆಗೋಗಿದಿನಿ ಅಂತನಾ?  ಅಥವಾ busy ಆಗಿರೋ ತರ pretend ಮಾಡ್ತಿದಿನಾ??? ಅಥವಾ ಕಾಲೇಜ್,students , syllabus , exam , ಪೇಪರ್ valuation ಗಳ ಮಧ್ಯ ಕಳೆದುಹೋಗಿದ್ದೆನಾ??.. anyhow    ಇವತ್ತಿಗೆ ಎಲ್ಲ ಕೆಲಸ ಮುಗಿತು...ಬೇಸಿಗೆ ರಜೆನು ಶುರುವಾಯಿತು ...ಊರಿಗೆ ಹೋಗೋ ಗಡಿಬಿಡಿ.. ಅಷ್ಟರಲ್ಲೇ ನನ್ನ ಬ್ಲಾಗ್ ನೆನಪಾಗಿದ್ದು..ಏನಾದ್ರು ಬರಿಯೋಣ ಅಂತ ಅನಿಸಿದ್ದು ನಿಜ..ಆದರೆ ಏನು ಬರಿಯೋದು?????? ಎಷ್ಟೊಂದಿದೆ ಬರಿಯೋಕೆ ......ಎಲ್ಲಿಂದ ಶುರು ಮಾಡೋದು??? ನನ್ first batch farewell party ಬಗ್ಗೆನಾ? ಇಂಡಿಯಾ worldcup ಗೆದ್ದಾಗ ನಾನೇ ಗೆದ್ದೋಳ ತರ ಖುಷಿಪಟ್ಟೆ ..ಅದರ ಬಗ್ಗೆನಾ? ಅಥವಾ ನಮ್ HOD ಜೊತೆ ಸಣ್ಣದಾಗಿ ಶೀತಲ ಸಮರ ಶುರುವಾಗಿದೆಯಲ್ಲ  ಅದ್ರ ಬಗ್ಗೆನಾ?????? ಫುಲ್ confuse confuse confuse ....anyhow ಸದ್ಯಕ್ಕಂತೂ packing ಮುಗಿಸಿ ನಾಳೆ ಊರಿಗೆ ಹೊರಡೋ ತಯಾರಿ ಮಾಡಬೇಕು....ಮನೆಗೆ ಹೋಗಿ ಅಮ್ಮನ ಕೈ ಅಡಿಗೆ ಊಟ ಮಾಡ್ಬೇಕು...ಅವಾಗ ಬರಿಯೋಕೆ ಏನಾದ್ರು ಸ್ಫೂರ್ತಿ ಬರಬಹುದು....:)))  ಅಲ್ಲಿವರೆಗೂ ನೀವು ಈ Photos ನೋಡಿ...:)
First Batch of My teaching Career....BA honours Economics students......learnt a lot from them.....:)
My Colleagues with Gaayithri Madam.....She is My Role Model....

With Mahesh and Camelo......:)

Friday, December 10, 2010

"GOOD FRIENDS"- .....:)

Add caption
"GOOD" FRIENDS !

Wednesday, October 6, 2010

ಸ್ನೇಹದ ಕಡಲಲ್ಲಿ II

ಬೆಳಿಗ್ಗೆ ಬೆಳಿಗ್ಗೆ ನೂತನ್ call ಮಾಡಿದ್ಲು..ಖುಷಿ ಆಯಿತು..ತುಂಬಾ ದಿನದ ನಂತರ ಮಾತಾಡಿದ್ವಿ....ಹಳೆ ದಿನಗಳೆಲ್ಲ ನೆನಪಾಯ್ತು...ಕಾಲೇಜ್ ಅಲ್ಲಿ ಇದ್ದಾಗ ನಮ್ಮದೊಂದು ಗ್ಯಾಂಗ್ ಇತ್ತು....ನಾನು, ನೂತನ್,ಸಂತೋಷಿ, ಸುಮಿತ್ರ, ಪಲ್ಲವಿ, ವಿಶು, ಮೊಹಮ್ಮದ, ಅಬ್ಬಾಸ್, ಮುರಳಿ.....ಕಾಲೇಜ್ campus ಅಲ್ಲಿ ಎಲ್ಲಿ ನೋಡಿದ್ರು ನಾವೇ ಕಾಣಿಸ್ತಿದ್ವಿ....ಕ್ಯಾಂಟೀನ್ ಅಲ್ಲಿ, ಗ್ರೌಂಡ್ ಅಲ್ಲಿ, ಲೈಬ್ರರಿನಲ್ಲಿ .......ಕ್ಯಾಂಟೀನ್ ಎದುರಿಗೆ ಒಂದು ಮರ ಇತ್ತು....ಅಲ್ಲಿ ಕುತ್ಕೊಂಡು ಹರಟೆ ಹೊಡಿತಿದ್ವಿ...ಆ ದಿನಗಳನೆಲ್ಲಾ ನೆನಸ್ಕೊಂಡ್ರೆ ಇವಾಗಿನ ಲೈಫ್ ತುಂಬಾ ಬೋರ್ ಅನ್ಸತ್ತೆ...

ಒಂದು incident ಅಂತು ಯಾವತ್ತು ಮರಿಯೋಕ್ ಸಾಧ್ಯ ಇಲ್ಲ.....ಒಂದಿನ picknic ಹೋಗೋಣ  ಅಂತ ಡಿಸೈಡ್ ಮಾಡಿದ್ವಿ...ಹಂಗೆ ನೋಡಿದ್ರೆ ದಾಂಡೇಲಿ ತುಂಬಾ ಒಳ್ಳೆ place ...ಮುರಳಿ ಮತ್ತೆ ವಿಶು ನೇತೃತ್ವದಲ್ಲಿ ಹೋಗೋದು ಅಂತ decide  ಆಯಿತು..ಅವಾಗ ದಾಂಡೇಲಿಯಲ್ಲಿ ಒಂದು Manganese ಫ್ಯಾಕ್ಟರಿ ಇತ್ತು...ಅದು ಯಾವುದೊ reasonಗೋಸ್ಕರ ಬಂದ್ ಆಗಿತ್ತು....ಅದು ಪೋಲಿಸ್ protected  area  ಅಂತ ನಮಗೆ ಗೊತ್ತಿರ್ಲಿಲ್ಲ.....one fine day  picnic ಹೊರಟ್ವಿ ...ಮನೇಲಿ ಅಮ್ಮನ ಹತ್ರ ಏನೇನೋ ತಿಂಡಿ ಮಾಡಿಸ್ಕೊಂಡು, ಎಲ್ಲರು ಬೆಳಿಗ್ಗೆ ೮.೩೦ ಗೆ ಮನೆಯಿಂದ ಹೊರಟೆ ಬಿಟ್ವಿ.....ನಮ್ಮ ಸಡಗರ ಸಂಭ್ರಮ ವರ್ಣಿಸಲು ಸಾಧ್ಯ ಇಲ್ಲ.......ಮನೆಯಿಂದ ಸುಮಾರು ದೂರ ಇತ್ತು.....ಹಾಗೆ ಹೀಗೆ ಮಾತಾಡ್ಕೊಂಡು, joke ಮಾಡ್ಕೊಂಡು ತಲುಪಬೇಕಾದ ಜಾಗಕ್ಕೆ ಬಂದು ಮುಟ್ಟಿದ್ವಿ....ಅಲ್ಲಿ ಕಾದಿತ್ತು  ಮಜಾ ನಮಗೆ.....ನಾವು ಆ ಜಾಗದಲ್ಲಿ ಕಾಲಿಟ್ಟ ತಕ್ಷಣ ಸುಮಾರು ಜನ ಪೋಲಿಸ್ ನಮ್ ಸಮೀಪನೇ ಬಂದು ಬಿಟ್ರು.....ನಮಗೆ ಏನ್ ಅಂತಾನೆ ಅರ್ಥ ಆಗ್ತಿಲ್ಲ...ಅವ್ರು ನಮ್ ಜಾತಕನೆಲ್ಲ ಕೇಳೋಕೆ ಶುರು ಮಾಡಿದ್ರು....ಅವ್ರು ನಮ್ಮನ್ನ ಏನ್ ಅನ್ಕೊಂಡ್ರೋ ಗೊತ್ತಿಲ್ಲ....may be ಯಾರೋ ಆತಂಕವಾದಿಗಳು ಅಂತ ಅನ್ಕೊಂಡಿರ್ಬೇಕು......ನಮ್ ಬ್ಯಾಗ್ ಎಲ್ಲ ಚೆಕ್ ಮಾಡೋಕ್ ಶುರು ಮಾಡಿದ್ರು....ಆ ಪೊಲೀಸರು ಹೇಗಿದ್ರು ಅಂದ್ರೆ ಅವ್ರಿಗೆ basic curtsy  ಕೂಡ  ಇರಲಿಲ್ಲ....ವಿಶು ಮತ್ತೆ ಮುರಳಿ ಗೆ ಫುಲ್ tension ಶುರು ಆಗಿತ್ತು...ಅಬ್ಬಾಸ್ ಮನೆಯಿಂದ ಇಡ್ಲಿ ತಂದಿದ್ದ.....ಒಬ್ಬ ಪೋಲಿಸ್ ಅದ್ರಲ್ಲಿ ಏನಿದೆ ಅಂತ ಕೇಳಿದ್ರು..ಇಡ್ಲಿ ಅಂತ ಅಂದ್ವಿ......ಅವ್ರು ಕೇಳಿದ next  ಪ್ರಶ್ನೆ ಏನ್ ಗೊತ್ತ? ಅದ್ರಲ್ಲಿ bomb ಇಲ್ಲ ತಾನೇ ಅಂತ.....ಅವ್ರು ಹಂಗೆ ಕೇಳಿದ ತಕ್ಷಣ ಸುನಿಲ್ ಗೆ ಏನ್ ಆಯ್ತೋ ಗೊತ್ತಿಲ್ಲ sudden  ಆಗಿ ತಿಂದು ನೋಡಿ ಬಾಂಬ್ ಇದ್ಯೋ ಇಲ್ವೋ ಗೊತ್ತಾಗತ್ತೆ ಅಂದ......ಆ ಪೋಲಿಸ್ ತಕ್ಷಣ ನಂಗೆ answer  ಕೊಡ್ತಿಯ ಅಂತ ಎರಡು ಕೊಟ್ಟೆ ಬಿಟ್ಟ.....ನಮಗೆಲ್ಲ ಭಯ ಆಗಿ ಅಳೋಕೆ ಶುರು ಮಾಡಿದ್ವಿ....ಹೆಂಗೆಂಗೋ ಮಾಡಿ ಮುರಳಿ, ವಿಶು ಪೋಲಿಸ್ ರಿಗೆ convince  ಮಾಡಿ ಹುಡುಗೀರ್ ಗೆಲ್ಲ ಮನೆಗ್ ಹೋಗೋಕೆ  permission ತಗೊಂಡ....ಆದ್ರೆ ನಾವು ಜೊತೆಗೆ ಹೋದೋರು ಅವರನ್ನ ಬಿಟ್ಟು ಹೇಗೆ ಬರೋದು ಅಂತ ಚಿಂತೆ....ಹಾಗಂತ ಅಲ್ಲಿರೋಕು ಸಾಧ್ಯ ಇಲ್ಲ.....ಅಷ್ಟೊಂದು ಭಯಾನಕ ವಾತಾವರಣ....ಆಮೇಲೆ ನಾವೆಲ್ಲಾ ಹುಡ್ಗಿರು ಮನೆಗ್ ಬಂದುಬಿಟ್ಟೆವು...ಆದ್ರೆ ಯಾರು ಮನೆಗೆ ಹೋಗಲಿಲ್ಲ.....ಯಾಕಂದ್ರೆ ಮನೇಲಿ ಇಷ್ಟ್ ಬೇಗ picnic ಮುಗಿತಾ ಅಂತ ಕೇಳಿದ್ರೆ ಏನ್ ಅನ್ನೋದು....ಮೊದ್ಲೇ ಡಿಸೈಡ್ ಆಗಿತ್ತು ಮನೆನಲ್ಲಿ ಈ ವಿಷಯ ಹೇಳೋದು ಬೇಡ ಅಂತ....ನೂತನ್  ಅಮ್ಮ  ಊರಿಗೆ ಹೋಗಿದ್ರು..ಅವ್ರ ಮನೇನೆ safe  ಅಂತ ಅಲ್ಲಿಗೆ ಹೋದ್ವಿ....ಎಷ್ಟೋ ಹೊತ್ತಾದ  ಮೇಲೆ  ಮುರಳಿ, ವಿಶು, ಅಬ್ಬಾಸ್,ಮೊಹಮ್ಮದ್ , ಸುನಿಲ್ ಎಲ್ಲ ಬಂದ್ರು  .....ಅವ್ರು banda  ತಕ್ಷಣ   ಎಲ್ಲರಿಗು   ಒಂಥರಾ relief ಆಯಿತು..ಇವರೆಲ್ಲ  ಸೇರಿ   ಆ ಪೋಲಿಸ್ ರಿಗೆ ಏನೇನೋ convince  ಮಾಡಿ escape ಆಗಿ ಬಂದಿದ್ರಂತೆ  .. ಆಮೇಲೆ  ನೂತನ್ ಮನೇಲಿ  ಬೆಳಿಗ್ಗೆ ಅಗಿರೋದ್ನೆಲ್ಲ  ನೆನ್ಸ್ಕೊಳ್ತಾ ......ಅವಾಗ ಅದ್ನೆಲ್ಲ  ನೆನಸ್ಕೊಂಡು  ಭಯ ಪಡೋ  ಬದಲು  ನಗು  ಬರ್ತಿತ್ತು .....ಆಮೇಲೆ ನೂತನ್ ಮನೇಲೆ  ಊಟ ಮಾಡಿ picnic "the end"ಮಾಡಿದ್ವಿ ....but ಇವಾಗ್ಲು ನೆನಸ್ಕೊಂಡು  ನಗುವಂತ  ಸಂಗತಿ  ಅಂದ್ರೆ , ಒಬ್ಬ ಪೋಲಿಸ್  ವಿಶುಗೆ  ಏನೋ ಬೈದ  ಅಂತೆ  ....ಅದ್ಕೆ  ವಿಶು ಫುಲ್ pose ಕೊಟ್ಟು  ನಮ್ uncle RTO officer ಅಂತ ಅಂದ ante...ಅದ್ಕೆ  ಆ ಪೋಲಿಸ್ ವಿಶುಗೂ  ಎರಡು ಬಿಟ್ಟಿದ್ದ  ಅಂತೆ .....ಅದ್ನೆಲ್ಲ  ಹೇಳ್ಕೊಂಡು  ನಕ್ಕಿದ್ದೆ  ನಕ್ಕಿದ್ದು ......ಅವತ್ತಿಂದ  ನಂಗೆ ಪೋಲಿಸ್ ಕಂಡ್ರೆನೆ ಭಯ....ಇವಾಗ  ವಿಶು criminal lawyer ಆಗಿದಾನೆ ....ನಾವೆಲ್ಲರೂ  ನಮ್ ನಮ್ ಲೈಫ್ ಅಲ್ಲಿ settle ಆಗಿದಿವಿ ....ಆದ್ರೆ ಇವಾಗ್ಲು  ಕಾಲ್ ಮಾಡಿದಾಗ   ಈ incident ನೆನಸ್ಕೊಂಡು  ನಗೋದನ್ನ  ಮಾತ್ರ  ಮರೆಯಲ್ಲ ......:)

Saturday, September 4, 2010

ಸ್ನೇಹದ ಕಡಲಲ್ಲಿ,

ಸ್ನೇಹ ಅನ್ನೋದು ಎಸ್ಟೊಂದು ಪವಿತ್ರ ಸಂಬಂಧ ಅಲ್ವ? ನಂಗಂತೂ ಜಗತ್ತಲ್ಲಿ ಎಲ್ರಿಗಿಂತ ಒಳ್ಳೆ ಫ್ರೆಂಡ್ಸ್ ಸಿಕ್ಕಿದ್ದಾರೆ...ಯಾಕೋ ಇವತ್ತು ನನ್ ಎಲ್ಲ ಫ್ರೆಂಡ್ಸ್ ಬಗ್ಗೆ ಬರೀಬೇಕು ಅನ್ಸಿದೆ....ನಾನ್ primary ಸ್ಕೂಲ್ ಅಲ್ಲಿ ಇದ್ದಾಗ ಜ್ಯೋತಿ ಅಂತ ಒಂದು ಫ್ರೆಂಡ್ ಇದ್ಲು...but  ಇವಾಗ ಅವ್ಳು ಎಲ್ಲಿ ಇದಾಳೋ ಗೊತ್ತಿಲ್ಲ....ನಾವು ಮಾಡಿದ ಕಾರಸ್ತಾನಗಳು ಇವಾಗಲು ನೆನಪಿದೆ......ನಾವಿಬ್ರು ಅಕ್ಕ ಪಕ್ಕ ಕುತ್ಕೊತಿದ್ದಿದ್ದು, ಅವ್ಳು ನಂಗೆ ಹೂ ತಂಡ್ಕೊತ್ತಿದ್ದು, ನಾವಿಬ್ರು ಸೇರಿ ನಮ್ PE ಟೀಚರ್ ಗೆ ಬೈತಿದ್ದಿದ್ದು, drama ಮಾಡಿದ್ದು, ಡಾನ್ಸ್ ಮಾಡಿದ್ದು, ಕಿತ್ತಾಡಿದ್ದು, ಅವ್ಳು ನಂಗೆ ಅವ್ರ ಮನೆಗ್ ಕರ್ಕೊಂಡ್ ಹೋಗಿ ಉಟ ಮಾಡ್ಸಿದ್ದು ........ಎಲ್ಲ ನೆನಸ್ಕೊಂಡ್ರೆ ಇವಾಗ ನಗು ಬರತ್ತೆ.....:)  ಆಮೇಲೆ high ಸ್ಕೂಲ್.....ನಂದು ಹುಡುಗಿಯರ ಸ್ಕೂಲ್....ನಮ್ಮದೇ ದರಬಾರು... ಅಲ್ಲಿ ನಮ್ಮದೇ ಒಂದು ಗ್ಯಾಂಗ್ ....ನಾನು, ಪ್ರಿಯಾ, ಸ್ಮಿತಾ, ಶಾಹಿದ, ಗೀತಾ, ಮನಿಷ, ರೂಪಶ್ರೀ...............ಅದ್ರಲ್ಲಿ  ಪ್ರಿಯಾ was my best friend ....ಅವಳೂ ಎಲ್ಲಿದಾಳೆ ಅಂತ ಗೊತ್ತಿಲ್ಲಾ.....:(  ಕಳೆದುಹೊಗಿರೋ ಎಲ್ಲರನ್ನು ಹುಡ್ಕೋ ಪ್ರಯತ್ನ ಮಾಡ್ತಾ ಇದೀನಿ......ನೋಡ್ಬೇಕು ಯಾವಾಗ ಸಿಕ್ತಾರೆ ಅಂತ.....

ನನ್ ಕಾಲೇಜ್ ಫ್ರೆಂಡ್ಸ್ ಬಗ್ಗೆ ಬರಿಯೋಕೆ ಹೋದ್ರೆ ಟೈಮ್ ಸಾಲಲ್ಲ.....ಅವರೆಲ್ಲ ಇವಾಗ್ಲು ನನ್ ಜೊತೆ ಇದಾರೆ..ಮುರಳಿ, ಅಜಯ್,ಮಾರ್ಗರೆಟ್, ಸುಮಿತ್ರ,ನೂತನ್,ಪಲ್ಲವಿ, ಸಂತೋಷಿ, ವಿಷು, ಮಹಮ್ಮೊದ್, ಆಶಾ, ರಶ್ಮಿ, ನೀಲು, ರೇಖಾ, ರಾಜೇಶ್, ಪ್ರೇಮ,ಗುರು, ಸಾಹಿತಿ, ಜಯ, ಸುಜ, ಪೂರ್ಣಿಮಾ, ......................ಇನ್ನು ಇದೆ ಹೆಸರುಗಳು......

 ಕೆಲವೊಂದು ತುಂಬಾ ಸ್ಪೆಷಲ್ ಫ್ರೆಂಡ್ಸ್ ಬಗ್ಗೆ ಕೂಡ ಬರೀಬೇಕು.......ಕಾಲೇಜ್ ಡೇಸ್ ಅಲ್ಲಿ ನಡೆದಿರೋ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲೇಬೇಕು.......ಅದನ್ನ next  ಪೋಸ್ಟ್ ಅಲ್ಲಿ ಬರೀತೀನಿ......:)



ರಾಜಿ

Tuesday, August 31, 2010

ಮಳೆಯಲಿ ಜೊತೆಯಲಿ.....:)

ನಿನ್ನೆ question bank , ಅದು ಇದು ಅಂತ ಕಾಲೇಜಿನ ಕೆಲಸ ಮುಗಿಸಿ ಮನೆಗೆ ಹೊರಡೋವಾಗ ೫ ಗಂಟೆ.......ಮೊದಲೇ ಬೆಳಿಗ್ಗೆಯಿಂದ ಕೆಲಸ ಮಾಡಿ ಮನೆಗೆ ಹೋಗಿ ಮುಟ್ಟಿದರೆ ಸಾಕಪ್ಪ ಅನ್ನೋ ಭಾವ ....ಅದ್ರಲ್ಲಿ ಕಾಲೇಜಿನ ಗೇಟ್ ಇಂದ ಆಚೆ ಬರೋದಕ್ಕೂ ಮಳೆ ಧೋ ಅಂತ ಸುರಿಯೋದಕ್ಕು ಸರಿ ಹೋಯ್ತು...ಇನ್ನೇನು ಮಳೆ ಬೀಳ್ತಿದೆಯಲ್ಲ , ನಡ್ಕೊಂಡು ಹೋಗೋಕೆ ಕಷ್ಟ ಅಂತ ಆಟೋ ಗೆ  ಕಾಯ್ತಾ ಇದ್ದೆ......ಅಂತು ಇಂತೂ ಸ್ವಲ್ಪ ಹೊತ್ತು ಕಾದ  ಮೇಲೆ ಒಂದು ಆಟೋ ಸಿಕ್ತು.........ಇನ್ನೂ ಮಳೆ ಸುರಿತಾನೆ ಇತ್ತು....ಆಟೋ ಸಿಕ್ಕ ಖುಷಿಲಿ ಹತ್ತಿ ಕುಳಿತೆ.....ಮಳೆಲಿ ನಾನು ನೆನಿಬಾರದು ಅಂತ ಕಷ್ಟ ಪಟ್ಟು ಆಟೋ ಹತ್ತಿ ಕುತ್ಕೊಂಡ್ರೆ, ಸ್ವಲ್ಪಾನೆ ಹೊತ್ತಲ್ಲಿ ಆ ಆಟೋ ಕೂಡ ಸೋರೋಕೆ ಶುರು ಆಗಬೇಕಾ? ಕರೆಕ್ಟ್ ಆಗಿ ತಲೆ ಮೇಲೆ ಸೋರೋಕೆ ಶುರು ಆಯಿತು.....ಎರಡು ಬಾಗಿಲಿಂದ ಮಳೆ ರಾಯ ಒಳಗೆ ಬರ್ತಾ ಇತ್ತು.....ಮೊದ್ಲೇ ಕೆಲಸ ಮಾಡಿ ಸುಸ್ತಾಗಿತ್ತು.....ಆಟೋ ಬೇರೆ ಸೋರುತ್ತ ಇತ್ತು...ಆ ಸಿಟ್ಟನ್ನ ಆಟೋದವನ ಮೇಲೆ ತೋರ್ಸಿದ್ರೆ ಅವ್ನು ಪಾಪ "ಏನ್ ಮಾಡೋದು ಮೇಡಂ " ಅಂತ ಅನ್ನಬೇಕ? ಅಂತು ಇಂತೂ traffic ಜಾಮ್ ಅಲ್ಲಿ ಸಿಕ್ಕು ಮನೆಗೆ ಹೋಗೋ ಹೊತ್ತಿಗೆ ೬.೧೫...ಆಟೋ ಇಂದ ಇಳಿದ ತಕ್ಷಣ ಗೊತ್ತಾಯ್ತು ನಾನು ಫುಲ್ ನೆನೆದೊಗಿದಿನಿ ಅಂತ........ಆಮೇಲೆ ಅನ್ಸ್ತು ಆಟೋನಲ್ಲಿ ಬರೋದಕ್ಕಿಂತ ನಡ್ಕೊಂಡೆ ಬಂದಿದ್ರೆ at least "ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು......." ಅಂತ ಹಾಡ್ಕೊಂಡು ಬರಬಹುದಿತ್ತು ಅಂತ........:)

Friday, August 13, 2010

ಯಾಕೋ ಬೇಜಾರು..........:)

ತುಂಬಾ ದಿನಗಳ ನಂತರ ಬರೀತಾ ಇದೀನಿ....ಏನ್ ಬರಿಲಿ ಯಾವುದರ ಬಗ್ಗೆ ಬರಿಲಿ ಅಂತ ಗೊತ್ತಾಗ್ತಿಲ್ಲ..ಯಾವಾಗ್ಲೂ ಖುಷಿಯಾಗಿರೋ ನನಗೆ ಇವತ್ತು ಒಂತರಾ ಬೇಜಾರು.....ಯಾಕೆ ಏನು ಗೊತ್ತಿಲ್ಲ.....ಕೆಲವೊಮ್ಮೆ ವಿನಾಕಾರಣ ಈ ರೀತಿ ಬೇಜಾರಾಗತ್ತೆ ಅಂತ ಕೇಳಿದೀನಿ.....ಯಾವಾಗಲೂ ಕೆಲಸದಲ್ಲಿ ಮುಳುಗಿರೋ ನಂಗೆ ಒಂದು ಬ್ರೇಕ್ ಬೇಕು ಅಂತ ಅನಿಸುತ್ತಿದೆ....ಆದ್ರೆ ಇವಾಗಿರೊ ವರ್ಕ್ pressure ಅಲ್ಲಿ ಬ್ರೇಕ್ ತಗೋಳೋದು ಕನಸಿನ ಮಾತು......ಇದ್ದಿದ್ರಲ್ಲಿ ಖುಷಿ ಕೊಡೊ ಸಂಗತಿ ಅಂದ್ರೆ ನನ್ ತಮ್ಮ ಕೂಡ ಓದೋಕೆ ಅಂತ ಇಲ್ಲಿಗೆ ಬರ್ತಿದಾನೆ......ಅದ್ಕೆ ಫುಲ್ ಖುಷಿಯಾಗಿದಿನಿ...:) .....MSc in Multimedia and Animation ಕೋರ್ಸ್ ಗೆ admission  ಸಿಕ್ಕಿದೆ.......ಅವನದೇ ಆದ  ನೂರಾರು ಕನಸುಗಳ ಜೊತೆಗೆ ಮಾಯಾ ನಗರಿ ಬೆಂಗಳೂರಿಗೆ ಬರ್ತಿದಾನೆ....ಅವ್ನ ಎಲ್ಲ ಕನಸು ನನಸಾಗಲಿ ಅನ್ನೋದು ನನ್ನ ಹಾರೈಕೆ ......:)