Tuesday, August 31, 2010

ಮಳೆಯಲಿ ಜೊತೆಯಲಿ.....:)

ನಿನ್ನೆ question bank , ಅದು ಇದು ಅಂತ ಕಾಲೇಜಿನ ಕೆಲಸ ಮುಗಿಸಿ ಮನೆಗೆ ಹೊರಡೋವಾಗ ೫ ಗಂಟೆ.......ಮೊದಲೇ ಬೆಳಿಗ್ಗೆಯಿಂದ ಕೆಲಸ ಮಾಡಿ ಮನೆಗೆ ಹೋಗಿ ಮುಟ್ಟಿದರೆ ಸಾಕಪ್ಪ ಅನ್ನೋ ಭಾವ ....ಅದ್ರಲ್ಲಿ ಕಾಲೇಜಿನ ಗೇಟ್ ಇಂದ ಆಚೆ ಬರೋದಕ್ಕೂ ಮಳೆ ಧೋ ಅಂತ ಸುರಿಯೋದಕ್ಕು ಸರಿ ಹೋಯ್ತು...ಇನ್ನೇನು ಮಳೆ ಬೀಳ್ತಿದೆಯಲ್ಲ , ನಡ್ಕೊಂಡು ಹೋಗೋಕೆ ಕಷ್ಟ ಅಂತ ಆಟೋ ಗೆ  ಕಾಯ್ತಾ ಇದ್ದೆ......ಅಂತು ಇಂತೂ ಸ್ವಲ್ಪ ಹೊತ್ತು ಕಾದ  ಮೇಲೆ ಒಂದು ಆಟೋ ಸಿಕ್ತು.........ಇನ್ನೂ ಮಳೆ ಸುರಿತಾನೆ ಇತ್ತು....ಆಟೋ ಸಿಕ್ಕ ಖುಷಿಲಿ ಹತ್ತಿ ಕುಳಿತೆ.....ಮಳೆಲಿ ನಾನು ನೆನಿಬಾರದು ಅಂತ ಕಷ್ಟ ಪಟ್ಟು ಆಟೋ ಹತ್ತಿ ಕುತ್ಕೊಂಡ್ರೆ, ಸ್ವಲ್ಪಾನೆ ಹೊತ್ತಲ್ಲಿ ಆ ಆಟೋ ಕೂಡ ಸೋರೋಕೆ ಶುರು ಆಗಬೇಕಾ? ಕರೆಕ್ಟ್ ಆಗಿ ತಲೆ ಮೇಲೆ ಸೋರೋಕೆ ಶುರು ಆಯಿತು.....ಎರಡು ಬಾಗಿಲಿಂದ ಮಳೆ ರಾಯ ಒಳಗೆ ಬರ್ತಾ ಇತ್ತು.....ಮೊದ್ಲೇ ಕೆಲಸ ಮಾಡಿ ಸುಸ್ತಾಗಿತ್ತು.....ಆಟೋ ಬೇರೆ ಸೋರುತ್ತ ಇತ್ತು...ಆ ಸಿಟ್ಟನ್ನ ಆಟೋದವನ ಮೇಲೆ ತೋರ್ಸಿದ್ರೆ ಅವ್ನು ಪಾಪ "ಏನ್ ಮಾಡೋದು ಮೇಡಂ " ಅಂತ ಅನ್ನಬೇಕ? ಅಂತು ಇಂತೂ traffic ಜಾಮ್ ಅಲ್ಲಿ ಸಿಕ್ಕು ಮನೆಗೆ ಹೋಗೋ ಹೊತ್ತಿಗೆ ೬.೧೫...ಆಟೋ ಇಂದ ಇಳಿದ ತಕ್ಷಣ ಗೊತ್ತಾಯ್ತು ನಾನು ಫುಲ್ ನೆನೆದೊಗಿದಿನಿ ಅಂತ........ಆಮೇಲೆ ಅನ್ಸ್ತು ಆಟೋನಲ್ಲಿ ಬರೋದಕ್ಕಿಂತ ನಡ್ಕೊಂಡೆ ಬಂದಿದ್ರೆ at least "ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು......." ಅಂತ ಹಾಡ್ಕೊಂಡು ಬರಬಹುದಿತ್ತು ಅಂತ........:)

8 comments:

  1. ರಾಜೇಶ್ವರಿ ಅವರೆ ಹೇಗಿದ್ದೀರಿ? ಬಹಳ ಬ್ಯುಸಿ ಇದ್ದೀರಾ? ಮಳೆಯಲ್ಲಿ ಆಟೋದಲ್ಲಿ ಚೆನ್ನಾಗಿದೆ.

    ReplyDelete
  2. Thanks sir, neevu hegiddira???? naan chenagiddene.....ISEC hegide?

    ReplyDelete
  3. hey raji,
    ene hegide nam college? students ge chennagi pata madu...ellandre nam college students hege anta gotta ninge pata helo astu budhivantaru....

    Savitha

    ReplyDelete
  4. ಹಲೋ ರಾಜೀ ಮೇಡಂ, ನಿಮ್ಮ ಬರಹ ಸೊಗಸಾಗಿದೆ. ಧನ್ಯವಾದ.

    ReplyDelete
  5. ರಾಜಿ ಮೆಡಮ್,
    ಅಂದ್ರೆ ಮಳೆ ಹೊರಗೆ...... ನೀರು ಮಾತ್ರ ಒಳಗೆ......
    ನನ್ನ ಬ್ಲೊಗ್ ಕಡೆ ಬನ್ನಿ......

    ReplyDelete