ಬೆಳಿಗ್ಗೆ ಬೆಳಿಗ್ಗೆ ನೂತನ್ call ಮಾಡಿದ್ಲು..ಖುಷಿ ಆಯಿತು..ತುಂಬಾ ದಿನದ ನಂತರ ಮಾತಾಡಿದ್ವಿ....ಹಳೆ ದಿನಗಳೆಲ್ಲ ನೆನಪಾಯ್ತು...ಕಾಲೇಜ್ ಅಲ್ಲಿ ಇದ್ದಾಗ ನಮ್ಮದೊಂದು ಗ್ಯಾಂಗ್ ಇತ್ತು....ನಾನು, ನೂತನ್,ಸಂತೋಷಿ, ಸುಮಿತ್ರ, ಪಲ್ಲವಿ, ವಿಶು, ಮೊಹಮ್ಮದ, ಅಬ್ಬಾಸ್, ಮುರಳಿ.....ಕಾಲೇಜ್ campus ಅಲ್ಲಿ ಎಲ್ಲಿ ನೋಡಿದ್ರು ನಾವೇ ಕಾಣಿಸ್ತಿದ್ವಿ....ಕ್ಯಾಂಟೀನ್ ಅಲ್ಲಿ, ಗ್ರೌಂಡ್ ಅಲ್ಲಿ, ಲೈಬ್ರರಿನಲ್ಲಿ .......ಕ್ಯಾಂಟೀನ್ ಎದುರಿಗೆ ಒಂದು ಮರ ಇತ್ತು....ಅಲ್ಲಿ ಕುತ್ಕೊಂಡು ಹರಟೆ ಹೊಡಿತಿದ್ವಿ...ಆ ದಿನಗಳನೆಲ್ಲಾ ನೆನಸ್ಕೊಂಡ್ರೆ ಇವಾಗಿನ ಲೈಫ್ ತುಂಬಾ ಬೋರ್ ಅನ್ಸತ್ತೆ...
ಒಂದು incident ಅಂತು ಯಾವತ್ತು ಮರಿಯೋಕ್ ಸಾಧ್ಯ ಇಲ್ಲ.....ಒಂದಿನ picknic ಹೋಗೋಣ ಅಂತ ಡಿಸೈಡ್ ಮಾಡಿದ್ವಿ...ಹಂಗೆ ನೋಡಿದ್ರೆ ದಾಂಡೇಲಿ ತುಂಬಾ ಒಳ್ಳೆ place ...ಮುರಳಿ ಮತ್ತೆ ವಿಶು ನೇತೃತ್ವದಲ್ಲಿ ಹೋಗೋದು ಅಂತ decide ಆಯಿತು..ಅವಾಗ ದಾಂಡೇಲಿಯಲ್ಲಿ ಒಂದು Manganese ಫ್ಯಾಕ್ಟರಿ ಇತ್ತು...ಅದು ಯಾವುದೊ reasonಗೋಸ್ಕರ ಬಂದ್ ಆಗಿತ್ತು....ಅದು ಪೋಲಿಸ್ protected area ಅಂತ ನಮಗೆ ಗೊತ್ತಿರ್ಲಿಲ್ಲ.....one fine day picnic ಹೊರಟ್ವಿ ...ಮನೇಲಿ ಅಮ್ಮನ ಹತ್ರ ಏನೇನೋ ತಿಂಡಿ ಮಾಡಿಸ್ಕೊಂಡು, ಎಲ್ಲರು ಬೆಳಿಗ್ಗೆ ೮.೩೦ ಗೆ ಮನೆಯಿಂದ ಹೊರಟೆ ಬಿಟ್ವಿ.....ನಮ್ಮ ಸಡಗರ ಸಂಭ್ರಮ ವರ್ಣಿಸಲು ಸಾಧ್ಯ ಇಲ್ಲ.......ಮನೆಯಿಂದ ಸುಮಾರು ದೂರ ಇತ್ತು.....ಹಾಗೆ ಹೀಗೆ ಮಾತಾಡ್ಕೊಂಡು, joke ಮಾಡ್ಕೊಂಡು ತಲುಪಬೇಕಾದ ಜಾಗಕ್ಕೆ ಬಂದು ಮುಟ್ಟಿದ್ವಿ....ಅಲ್ಲಿ ಕಾದಿತ್ತು ಮಜಾ ನಮಗೆ.....ನಾವು ಆ ಜಾಗದಲ್ಲಿ ಕಾಲಿಟ್ಟ ತಕ್ಷಣ ಸುಮಾರು ಜನ ಪೋಲಿಸ್ ನಮ್ ಸಮೀಪನೇ ಬಂದು ಬಿಟ್ರು.....ನಮಗೆ ಏನ್ ಅಂತಾನೆ ಅರ್ಥ ಆಗ್ತಿಲ್ಲ...ಅವ್ರು ನಮ್ ಜಾತಕನೆಲ್ಲ ಕೇಳೋಕೆ ಶುರು ಮಾಡಿದ್ರು....ಅವ್ರು ನಮ್ಮನ್ನ ಏನ್ ಅನ್ಕೊಂಡ್ರೋ ಗೊತ್ತಿಲ್ಲ....may be ಯಾರೋ ಆತಂಕವಾದಿಗಳು ಅಂತ ಅನ್ಕೊಂಡಿರ್ಬೇಕು......ನಮ್ ಬ್ಯಾಗ್ ಎಲ್ಲ ಚೆಕ್ ಮಾಡೋಕ್ ಶುರು ಮಾಡಿದ್ರು....ಆ ಪೊಲೀಸರು ಹೇಗಿದ್ರು ಅಂದ್ರೆ ಅವ್ರಿಗೆ basic curtsy ಕೂಡ ಇರಲಿಲ್ಲ....ವಿಶು ಮತ್ತೆ ಮುರಳಿ ಗೆ ಫುಲ್ tension ಶುರು ಆಗಿತ್ತು...ಅಬ್ಬಾಸ್ ಮನೆಯಿಂದ ಇಡ್ಲಿ ತಂದಿದ್ದ.....ಒಬ್ಬ ಪೋಲಿಸ್ ಅದ್ರಲ್ಲಿ ಏನಿದೆ ಅಂತ ಕೇಳಿದ್ರು..ಇಡ್ಲಿ ಅಂತ ಅಂದ್ವಿ......ಅವ್ರು ಕೇಳಿದ next ಪ್ರಶ್ನೆ ಏನ್ ಗೊತ್ತ? ಅದ್ರಲ್ಲಿ bomb ಇಲ್ಲ ತಾನೇ ಅಂತ.....ಅವ್ರು ಹಂಗೆ ಕೇಳಿದ ತಕ್ಷಣ ಸುನಿಲ್ ಗೆ ಏನ್ ಆಯ್ತೋ ಗೊತ್ತಿಲ್ಲ sudden ಆಗಿ ತಿಂದು ನೋಡಿ ಬಾಂಬ್ ಇದ್ಯೋ ಇಲ್ವೋ ಗೊತ್ತಾಗತ್ತೆ ಅಂದ......ಆ ಪೋಲಿಸ್ ತಕ್ಷಣ ನಂಗೆ answer ಕೊಡ್ತಿಯ ಅಂತ ಎರಡು ಕೊಟ್ಟೆ ಬಿಟ್ಟ.....ನಮಗೆಲ್ಲ ಭಯ ಆಗಿ ಅಳೋಕೆ ಶುರು ಮಾಡಿದ್ವಿ....ಹೆಂಗೆಂಗೋ ಮಾಡಿ ಮುರಳಿ, ವಿಶು ಪೋಲಿಸ್ ರಿಗೆ convince ಮಾಡಿ ಹುಡುಗೀರ್ ಗೆಲ್ಲ ಮನೆಗ್ ಹೋಗೋಕೆ permission ತಗೊಂಡ....ಆದ್ರೆ ನಾವು ಜೊತೆಗೆ ಹೋದೋರು ಅವರನ್ನ ಬಿಟ್ಟು ಹೇಗೆ ಬರೋದು ಅಂತ ಚಿಂತೆ....ಹಾಗಂತ ಅಲ್ಲಿರೋಕು ಸಾಧ್ಯ ಇಲ್ಲ.....ಅಷ್ಟೊಂದು ಭಯಾನಕ ವಾತಾವರಣ....ಆಮೇಲೆ ನಾವೆಲ್ಲಾ ಹುಡ್ಗಿರು ಮನೆಗ್ ಬಂದುಬಿಟ್ಟೆವು...ಆದ್ರೆ ಯಾರು ಮನೆಗೆ ಹೋಗಲಿಲ್ಲ.....ಯಾಕಂದ್ರೆ ಮನೇಲಿ ಇಷ್ಟ್ ಬೇಗ picnic ಮುಗಿತಾ ಅಂತ ಕೇಳಿದ್ರೆ ಏನ್ ಅನ್ನೋದು....ಮೊದ್ಲೇ ಡಿಸೈಡ್ ಆಗಿತ್ತು ಮನೆನಲ್ಲಿ ಈ ವಿಷಯ ಹೇಳೋದು ಬೇಡ ಅಂತ....ನೂತನ್ ಅಮ್ಮ ಊರಿಗೆ ಹೋಗಿದ್ರು..ಅವ್ರ ಮನೇನೆ safe ಅಂತ ಅಲ್ಲಿಗೆ ಹೋದ್ವಿ....ಎಷ್ಟೋ ಹೊತ್ತಾದ ಮೇಲೆ ಮುರಳಿ, ವಿಶು, ಅಬ್ಬಾಸ್,ಮೊಹಮ್ಮದ್ , ಸುನಿಲ್ ಎಲ್ಲ ಬಂದ್ರು .....ಅವ್ರು banda ತಕ್ಷಣ ಎಲ್ಲರಿಗು ಒಂಥರಾ relief ಆಯಿತು..ಇವರೆಲ್ಲ ಸೇರಿ ಆ ಪೋಲಿಸ್ ರಿಗೆ ಏನೇನೋ convince ಮಾಡಿ escape ಆಗಿ ಬಂದಿದ್ರಂತೆ .. ಆಮೇಲೆ ನೂತನ್ ಮನೇಲಿ ಬೆಳಿಗ್ಗೆ ಅಗಿರೋದ್ನೆಲ್ಲ ನೆನ್ಸ್ಕೊಳ್ತಾ ......ಅವಾಗ ಅದ್ನೆಲ್ಲ ನೆನಸ್ಕೊಂಡು ಭಯ ಪಡೋ ಬದಲು ನಗು ಬರ್ತಿತ್ತು .....ಆಮೇಲೆ ನೂತನ್ ಮನೇಲೆ ಊಟ ಮಾಡಿ picnic "the end"ಮಾಡಿದ್ವಿ ....but ಇವಾಗ್ಲು ನೆನಸ್ಕೊಂಡು ನಗುವಂತ ಸಂಗತಿ ಅಂದ್ರೆ , ಒಬ್ಬ ಪೋಲಿಸ್ ವಿಶುಗೆ ಏನೋ ಬೈದ ಅಂತೆ ....ಅದ್ಕೆ ವಿಶು ಫುಲ್ pose ಕೊಟ್ಟು ನಮ್ uncle RTO officer ಅಂತ ಅಂದ ante...ಅದ್ಕೆ ಆ ಪೋಲಿಸ್ ವಿಶುಗೂ ಎರಡು ಬಿಟ್ಟಿದ್ದ ಅಂತೆ .....ಅದ್ನೆಲ್ಲ ಹೇಳ್ಕೊಂಡು ನಕ್ಕಿದ್ದೆ ನಕ್ಕಿದ್ದು ......ಅವತ್ತಿಂದ ನಂಗೆ ಪೋಲಿಸ್ ಕಂಡ್ರೆನೆ ಭಯ....ಇವಾಗ ವಿಶು criminal lawyer ಆಗಿದಾನೆ ....ನಾವೆಲ್ಲರೂ ನಮ್ ನಮ್ ಲೈಫ್ ಅಲ್ಲಿ settle ಆಗಿದಿವಿ ....ಆದ್ರೆ ಇವಾಗ್ಲು ಕಾಲ್ ಮಾಡಿದಾಗ ಈ incident ನೆನಸ್ಕೊಂಡು ನಗೋದನ್ನ ಮಾತ್ರ ಮರೆಯಲ್ಲ ......:)
Wednesday, October 6, 2010
Subscribe to:
Post Comments (Atom)
ರಾಜಿ,
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರಿ ನಿಮ್ಮ ಅನುಭವವನ್ನ.... ಆ ನೆನಪುಗಳು ಎಷ್ಟು ಮಧುರ ಅಲ್ವಾ....?
ಶರನ್ನವರಾತ್ರಿ ಹಬ್ಬದ ಶುಭಾಶಯಗಳು.
ReplyDeleteಚೆನ್ನಾಗಿದೆ ನಿಮ್ಮ ಪ್ರವಾಸದ ಪ್ರಯಾಸದ ಅನುಭವ. ಹೇಗಿದ್ದೀರಿ? ಹೇಗಿದೆ ಕೆಲಸ? ನನ್ನ ಈ ಮೇಲ್ ಗೆ ಕಳಿಸಿ.
ಧನ್ಯವಾದಗಳು.
Hey, Really... adna nenaskondre eega nagu baratte alva??
ReplyDelete