Thursday, June 17, 2010

ಮೊದಲ ದಿನ.......

ಏನ್ ಗೊತ್ತಾ? ಇವತ್ತು ಬೆಳಿಗ್ಗೆ B .Com 1st sem ಗೆ ಬಿಸಿನೆಸ್ ಎಕಾನೋಮಿಕ್ಸ್ ಹೇಳೋಕೆ ಹೋಗಿದ್ದೆ....ತುಂಬಾ Naughty ಹುಡುಗರು.....:) specially  ಲಾಸ್ಟ್ ಬೆಂಚ್ ಅಲ್ಲಿ ಕುತ್ಕೊಳೋರು.....ಇವಾಗಷ್ಟೇ PU ಮುಗಿಸಿ ಫುಲ್ ಜೋಶ್ ಅಲ್ಲಿ ಬಂದಿದಾರೆ...ಇನ್ನು ಇಲ್ಲಿ atmosphere ಗೆ ಅಡ್ಜಸ್ಟ್ ಆಗಿಲ್ಲ ....ಕ್ಲಾಸ್ ಕೇಳೋಕೆ mooD ಇಲ್ಲ...:) ನಂದು ಇವತ್ತು introductory  ಕ್ಲಾಸ್...ಸುಮ್ನೆ economics  ಬಗ್ಗೆ ಏನ್ ಗೊತ್ತಿದೆ ಅಂತ ಕೇಳ್ದೆ.......ಅವರ answers ಕೇಳಿ ಫುಲ್ ಸುಸ್ತು.....they are so intelligent ......and  i m very proud to have such a wonderful students .....:) ಕ್ಲಾಸ್ ಮುಗಿಸಿ ಆಚೆ ಬರ್ತಾ ಇದ್ದೆ .....ಒಂದ್ ಹುಡುಗಿ ನನ್ ಹಿಂದೇನೆ ಬಂದಳು.....ಏನು ಅಂತ ತಿರುಗಿ ನೋಡಿದೆ...ಅವ್ಳು ಹೇಳಿದ್ದು ಒಂದೇ word ........Madam u  r  very  sweet ......:) ಸದ್ಯ ಇವಾಗ ನಾನು ಭೂಮಿ ಮೇಲೆ ಇಲ್ಲಾ....:)
ಹಾಡು ಹಾಡ್ತಿದಿನಿ....." ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ" ಅಂತ....  

Friday, June 11, 2010

.........

ತುಂಬಾ ದಿನಗಳ ನಂತರ ಬರಿತ ಇದೀನಿ...ಏನ್ ಬರಿಲಿ ಹೇಗೆ ಬರಿಲಿ ಗೊತ್ತಾಗ್ತಾ ಇಲ್ಲ...:)
ಇತ್ತೀಚಿಗೆ ಬ್ಲಾಗ್ ಅಲ್ಲಿ ಏನಾದ್ರು ಬರಿಯೋಣ ಅಂದ್ರೆ ಟೈಮ್ ಸಿಕ್ತಾನೆ ಇಲ್ಲ.....ಅಷ್ಟೊಂದು ಬ್ಯುಸಿ ಆಗಿದಿನಿ.....ದಿನ ಕ್ಲಾಸ್ ಗೆ prepare ಆಗಬೇಕು..ಅದು ೨-೩ ವಿಷಯ...ಬೆಳಿಗ್ಗೆ ಕಾಲೇಜ್ ಗೆ ಬಂದರೆ ಹೇಗೆ ಟೈಮ್ ಹೋಗತ್ತೆ ಅಂತಾನೆ ಗೊತ್ತಾಗಲ್ಲ...ಫಸ್ಟ್ ಟೈಮ್ join ಆಗಬೇಕಾದರೆ ಎಷ್ಟು ಭಯ ಪಟ್ಟಿದ್ದೆ .....ಹೊಸ  ಕಾಲೇಜ್ ......students ಹೇಗಿರ್ತಾರೋ ಏನೋ ಅಂತ.....ಅದೇ ಭಯದಲ್ಲಿ ಜೂನ್ ೧ ಗೆ ಬಂದು join ಆದೆ....ಫಸ್ಟ್ ಡೇ experience  ಮಾತ್ರ ಸೂಪರ್....ಜಗತ್ತಲ್ಲಿ The Best Profession ಅಂದ್ರೆ teaching   profession .........ಈ ಕೆಲಸದಲ್ಲಿರೋ ಮಜಾ ಬೇರೆ ಯಾವ profession  ಅಲ್ಲೂ ಇಲ್ಲ ಅನ್ಕೊತಿನಿ...:) ಇನ್ನು ನನ್ students  ಬಗ್ಗೆ ಹೇಳೋಕ್ ಹೋದ್ರೆ ಜಾಗ ಸಾಲೋದಿಲ್ಲ...ಅದನ್ನ next  ಪೋಸ್ಟ್ ಅಲ್ಲಿ ಬರೀತೀನಿ...ಕ್ಲಾಸ್ ಗೆ ಟೈಮ್ ಆಯಿತು...ಬರ್ಲಾ????.....:)