First of all Happy Mother's Day ಅಮ್ಮ....
ಅಮ್ಮ ಅಂದ ತಕ್ಷಣ ನೆನಪಾಗೋದು ಕೈ ತುತ್ತು......ಹಾಗೆ ಅದರ ಜೊತೆ ನೆನಪಾಗೋದು ಚಮ್ ಚಮ್ ಚಡಿ ಏಟು...:)
ಆವತ್ತೇನಾದ್ರು ನಮ್ ಅಮ್ಮ ಚಡಿ ಏಟು ಕೊಟ್ಟಿರಲಿಲ್ಲಾ ಅಂದ್ರೆ ಇವತ್ತು ನಾನ್ ಏನಾಗಿರ್ತಿದ್ದೆ ಅಂತಾ ಊಹಿಸೋದು ಕಷ್ಟ..... ಯಾಕೆ ಅಂದ್ರೆ ಚಿಕ್ಕೋಳಿದ್ದಾಗ ಎಷ್ಟೊಂದು ತರ್ಲೆ ಕೆಲಸ ಮಾಡ್ತಿದ್ದೆ ಅಂದ್ರೆ ಹೇಳಿದ್ರೆ ನೀವ್ ನಂಬಲ್ಲಾ...:) ಅಮ್ಮ ಚಡಿ ಹಿಡ್ಕೊಂಡಾಗ್ಲೆ ನಾವ್ ಓದೋಕ್ ಕೂತ್ಕೊತ್ತಿದ್ದಿದ್ದು...ಆವತ್ತು ಅಮ್ಮ ಕೋಲ್ ಹಿಡ್ಕೊಂಡು ಓದ್ಸಿರ್ಲಿಲ್ಲಾ ಅಂದ್ರೆ ಇವತ್ತು ನಾನ್ Ph.D ಮಾಡ್ತಾನೂ ಇರ್ಲಿಲ್ಲಾ....gold medal ತಗೋತಾನೂ ಇರ್ಲಿಲ್ಲ...ಇವತ್ತು ನಾನು ಬೆಂಗಳೂರಿನ ಪ್ರತಿಷ್ಟಿತ ಕಾಲೇಜ್ ಒಂದರಲ್ಲಿ ಲೆಕ್ಚರರ್.....ಇವತ್ತು ನಾನ್ ಈ ಲೆವಲ್ ಅಲ್ಲಿ ಇದಿನಿ ಅಂದ್ರೆ ಅದ್ಕೆ ಅಮ್ಮನೂ ಕಾರಣ....ಚಿಕ್ಕೋಳಿದ್ದಾಗ ಅಮ್ಮ ಬೆಳಿಗ್ಗೆ ೫ ಘಂಟೆಗೆ ಓದೋಕ್ ಎಬ್ಬಿಸೋರು...ನಾನ್ ನೋಡಿದ್ರೆ ಪುಸ್ತಕ ಹಿಡ್ಕೊಂಡು ಹಾಗೆ ಮಲ್ಕೊಂಡು ಬಿಡ್ತಿದ್ದೆ...ಎಷ್ಟೋ ದಿನ ರಾತ್ರಿ ನಾನ್ ಓದ್ಬೇಕಾದ್ರೆ ಅಮ್ಮಾನೂ ನನ್ ಜೊತೆ ಎಚ್ಚರ ಇರೋರು...ನಾನ್ First rank ಬಂದಾಗೆಲ್ಲಾ ನಮ್ ಅಮ್ಮ ಅವ್ರೆ rank ಬಂದಷ್ಟು ಖುಷಿ ಪಟ್ಟಿದಾರೆ.ನಂಗೆ ಹುಷಾರು ಇಲ್ದೆ ಇದ್ದಾಗೆಲ್ಲ ಎಷ್ಟೊಂದು ಸಂಕಟ ಪಟ್ಟಿದಾರೆ..ನಾನ್ ಚೆನ್ನಾಗಿ ಇರ್ಲಿ ಅಂತಾ ಎಷ್ಟೋ ದೇವ್ರಿಗೆ ಹರಕೆ ಹೊತ್ಕೊಂಡಿದಾರೆ...ನಾನ್ ಖುಷಿ ಪಟ್ಟಾಗೆಲ್ಲ ಅವ್ರೂ ಖುಷಿ ಪಟ್ಟಿದಾರೆ..ನನ್ ಕಣ್ಣಲ್ಲಿ ನೀರು ಕಂಡಾಗ ಅವ್ರೂ ಅತ್ತಿದಾರೆ......ಅದೆಲ್ಲಾ ಇನ್ನೂ ಕಣ್ಣ ಮುಂದೆ ಹಾಗೆ ಇದೆ...ಒಂದೊಂದ್ ಸಾರಿ ಎಷ್ಟು ಬೇಗ ದೊಡ್ಡೋಳಾಗ್ಬಿಟ್ಟೆ ಅಂತ ಅನ್ನಿಸತ್ತೆ.....ಆದ್ರೆ ಇವತ್ತೂ ನಮ್ ಅಮ್ಮಂಗೆ ನಾನ್ ಚಿಕ್ಕ ಹುಡ್ಗೀನೆ...ಇವತ್ತು ನಮ್ ಅಮ್ಮ ನಂಗೆ ಕೈ ತುತ್ತು ಕೊಡ್ತಾರೆ....:) ಅದ್ರಲ್ಲಿ ಇರೊ ಮಜಾ ಬೇರೆ ಯಾವುದರಲ್ಲೂ ಇಲ್ಲಾ...:) ಇವತ್ತಿಗೂ ಅಷ್ಟೆ ಅಮ್ಮಂಗೆ ನಾನ್ ಅಂದ್ರೆ ಪ್ರಾಣ.......:) ಅದ್ಕೆ ದೊಡ್ಡೋರು ಹೇಳೋದು ಅಮ್ಮನ ಪ್ರೀತಿ ಮುಂದೆ ಯಾವುದು ಇಲ್ಲಾ ಅಂತ......
LOVE U MOM..
Hello Doctree, Sooper blog :) Keep it up.
ReplyDeleteThought of dropping scrap in orkut but could not.
Wordings + way of expressing is good ,,, este aadru lecturer alwa .... "Enjoi The Life Fullest"
ರಾಜೇಶ್ವರಿ ಅವರೆ, 'ಅಮ್ಮ' ನ ಬಗ್ಗೆ ನಿಮಗಿರುವ ಪ್ರೀತಿ ಹಾಗೂ ಆಕೆಗಿದ್ದ ಕಾಳಜಿ, ಸಂತಸ, ನೋವು, ನಲಿವು ಎಲ್ಲ ತಿಳಿಸಿದ್ದೀರಿ. ನೀವು ಚಿನ್ನದ ಪದಕವಿಜೇತೆ ಎಂದು ತಿಳಿದದ್ದು ನಿಮ್ಮ ಬರಹ ಓದಿದಾಗಲೇ... ಅವರ ಹಾರೈಕೆ ಸದಾ ನಿಮಗೆ ಶ್ರೀರಕ್ಷೆಯಾಗಿರಲಿ.
ReplyDeleteNice article,
ReplyDeleteheege barita iri