Thursday, April 29, 2010
Wednesday, April 28, 2010
ಚಿಗುರು-ಪುಟಾಣಿಗಳಿಗೆ ಪುಸ್ತಕದ ಪರಿಚಯ
Posted by
Raaji (ರಾಜಿ)
ಬೆಂಗಳೂರಿನ ನಂಬರ್ ಒನ್ ರೇಡಿಯೊ ಸ್ಟೇಷನ್ ರೇಡಿಯೊ ಸಿಟಿ 91.1 FM ಹಾಗೂ World Vision ಅವರ ಸಹಯೋಗದಲ್ಲಿ "ಚಿಗುರು" ಎನ್ನುವ ವಿನೂತನ ಶೈಲಿಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ...ಒಂದು ಅರ್ಥಪೂರ್ಣ ಕಾರ್ಯಕ್ರಮ....ಈ programmeನ represent ಮಾಡ್ತಿದಾರೆ ನಮ್ಮ ಬೆಂಗಳೂರಿನ ಹುಡುಗ RJ ಪ್ರದೀಪ....
ದೇಶದ ಭವಿಷ್ಯ ನಿರ್ಧಾರ ಆಗೋದು ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಅಂತಾ ದೊಡ್ಡೋರು ಹೇಳಿದಾರೆ...ಅಂದರೆ ಇವತ್ತಿನ ಮಕ್ಕಳು ನಾಳಿನ ಭವಿಷ್ಯ.....ಈ ನಿಟ್ಟಿನಲ್ಲಿ ಯೋಚನೆ ಮಾಡಿದಾಗ "ಚಿಗುರು" ತುಂಬಾ ಅರ್ಥಪೂರ್ಣ ಕಾರ್ಯಕ್ರಮ ಅಂತಾ ಅನ್ನಿಸದೆ ಇರದು...
ಇವತ್ತಿಗೂ ಕೂಡ ಎಷ್ಟೋ ಮಕ್ಕಳು basic education ಪಡೆದುಕೊಳ್ಳೋದ್ರಿಂದ ವಂಚಿತರಾಗ್ತಾ ಇದಾರೆ..ಪ್ರತಿನಿತ್ಯ ಎಷ್ಟೋ ಕಡೆ ನಾವು ಪುಟ್ಟ ಪುಟ್ಟ ಮಕ್ಕಳು ಕೆಲಸ ಮಾದ್ತಿರೋದನ್ನ, ಬೀದಿ ಬದಿಯಲ್ಲಿ ಹೂ ಮಾರ್ತಿರೋದನ್ನ, ಭಿಕ್ಶೆ ಬೇಡ್ತಾ ಇರೋದನ್ನ ನೋಡ್ತಾ ಇರ್ತೀವಿ...of course ಬಸ್ ಸ್ಟ್ಯಾಂಡುಗಳಲ್ಲಿ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ, ಹೋಟೆಲ್ ಗಳಲ್ಲಿ ಈ ದೃಶ್ಯ ಸರ್ವೆ ಸಾಮನ್ಯ......ಅವ್ರನ್ನೆಲ್ಲಾ ನೋಡಿ ಬರಿ ಅಯ್ಯೋ ಪಾಪ ಅಂದ್ರೆ ಸಾಕೆ??????? ಇಂಥ ಮಕ್ಕಳಲ್ಲಿ ಎಷ್ಟೋ ಜನ ಮಕ್ಕಳಿಗೆ ಓದಬೇಕು ಅನ್ನೋ ಆಸೆ ಇರತ್ತೆ...ಆದ್ರೆ ಕಾರಣಾಂತರದಿಂದ ಓದೋಕೆ ಸಾಧ್ಯ ಆಗಲ್ಲಾ... ಅಂಥಾ ಮಕ್ಕಳಿಗೋಸ್ಕರ ಶಿಕ್ಷಣ ಕೊಡಿಸೋ ಉದ್ದೇಶದಿಂದ World vision ಅವರು "ಚಿಗುರು" ಅನ್ನೋ ಕಾರ್ಯಕ್ರಮನ ಪರಿಚಯಿಸಿದ್ದಾರೆ.
ಈ ಕಾರ್ಯಕ್ರಮದ ಮುಖಾಂತರ ನೀವೂ ಕೂಡ ಒಂದು ಮಗುವಿನ ಶಿಕ್ಷಣಕ್ಕೆ ಸಹಾಯ ಮಾಡಬಹುದು..ಒಂದು ಮಗುವಿನ ಒಂದು ವರ್ಷದ ಖರ್ಚು ಸುಮಾರು 7200 ರೂಪಾಯಿ.....ಅಂದರೆ ತಿಂಗಳಿಗೆ ಕೇವಲ 600 ರೂಪಾಯಿ.....ಒಂದು ವೀಕೆಂಡಲ್ಲಿ multiplex ಅಲ್ಲಿ ಒಂದು ಸಿನಿಮಾ ನೋಡಿ 600 ರೂಪಾಯಿ ಖರ್ಚು ಮಾಡೋ ನಾವು ಅದೆ ದುಡ್ಡನ್ನ ಒಂದು ಮಗುವಿನ ಶಿಕ್ಷಣಕ್ಕೆ ಖರ್ಚು ಮಾಡಬಹುದು...ಅಲ್ವಾ???? ನಿಮಗೆ ವಯಕ್ತಿಕವಾಗಿ ಈ amount ಹೆಚ್ಚು ಅನ್ನಿಸಿದಲ್ಲಿ 2-3 ಜನ ಸೇರಿ ಕೂಡ ಒಂದು ಮಗುವಿನ educationಗೆ sponsor ಮಾಡಬಹುದು......"ಹನಿ ಹನಿ ಸೇರಿದರೆ ಹಳ್ಳ ತೆನೆ ತೆನೆ ಸೇರಿದರೆ ರಾಶಿ" ಅಲ್ವ??????
ಮಕ್ಕಳು ನಾಳಿನ ಭವಿಷ್ಯ ಅಂತಾ ಬರಿ ಬಾಯಲ್ಲಿ ಹೇಳಿದರೆ ಸಾಕೇ???? ಎಲ್ಲರೂ ಒಟ್ಟಾಗಿ ಮಕ್ಕಳ ಭವಿಷ್ಯನ ರೂಪಿಸೋಣ......ಏನ್ ಅಂತೀರಾ??????????
ಹೆಚ್ಹಿನ ಮಾಹಿತಿಗೆ RCBLR ಅಂತಾ ಟೈಪ್ ಮಾಡಿ ನಿಮ್ ಹೆಸರು ಮತ್ತೆ contact ನಂಬರ್ ನ 57007ಗೆ ಕಳಿಸಿ....
ಅಥವಾ ಕೇಳಿ Radio City 91.1 FM.........
Wednesday, April 21, 2010
ರಂಗೋಲಿ..................
Posted by
Raaji (ರಾಜಿ)
ಜೀವಾ ಜೀವಾ ಸೇರಿಸೊ ಒಲವೆ ರಂಗೋಲಿ
ಯಾರೂ ಅಳಿಸದಂತಹ ಚೆಲುವೆ ರಂಗೋಲಿ
ಪ್ರತಿ ಜೀವದಾ ಎದೆ ಎದೆಯಂಗಳ
ಅನುಬಂಧದ ಗೆರೆ ಬಿಡಿಸೋ ನೆಲ
ಈ ಪ್ರೀತಿಯಾ ಕಲೆಗೆ ನಮನ
ಈ ಭೂಮಿಗೆ ಬಂದಾಗ ನಾವು ಎಲ್ಲೋ ಇದ್ದೋರು
ಈ ನೂರಾರು ಚುಕ್ಕೀಲಿ ನಾವು ಚುಕ್ಕಿ ಆದೋರು
ಈ ಚುಕ್ಕಿ ಸೇರಿಸೊದೆ ಪ್ರೀತಿಲಿ
ಈ ಪ್ರೀತಿ ಕಾಣದಂತ ರೇಖೇಲಿ
ಒಂದಾಗಿ ಸೇರಿದಾಗ ನಾವಿಲ್ಲಿ
ಈ ಬಾಳೆ ರಂಗು ರಂಗಿನ ರಂಗೋಲಿ..................
.............................................
..............................
Sunday, April 18, 2010
Sunday, April 11, 2010
Subscribe to:
Posts (Atom)