Saturday, September 4, 2010

ಸ್ನೇಹದ ಕಡಲಲ್ಲಿ,

ಸ್ನೇಹ ಅನ್ನೋದು ಎಸ್ಟೊಂದು ಪವಿತ್ರ ಸಂಬಂಧ ಅಲ್ವ? ನಂಗಂತೂ ಜಗತ್ತಲ್ಲಿ ಎಲ್ರಿಗಿಂತ ಒಳ್ಳೆ ಫ್ರೆಂಡ್ಸ್ ಸಿಕ್ಕಿದ್ದಾರೆ...ಯಾಕೋ ಇವತ್ತು ನನ್ ಎಲ್ಲ ಫ್ರೆಂಡ್ಸ್ ಬಗ್ಗೆ ಬರೀಬೇಕು ಅನ್ಸಿದೆ....ನಾನ್ primary ಸ್ಕೂಲ್ ಅಲ್ಲಿ ಇದ್ದಾಗ ಜ್ಯೋತಿ ಅಂತ ಒಂದು ಫ್ರೆಂಡ್ ಇದ್ಲು...but  ಇವಾಗ ಅವ್ಳು ಎಲ್ಲಿ ಇದಾಳೋ ಗೊತ್ತಿಲ್ಲ....ನಾವು ಮಾಡಿದ ಕಾರಸ್ತಾನಗಳು ಇವಾಗಲು ನೆನಪಿದೆ......ನಾವಿಬ್ರು ಅಕ್ಕ ಪಕ್ಕ ಕುತ್ಕೊತಿದ್ದಿದ್ದು, ಅವ್ಳು ನಂಗೆ ಹೂ ತಂಡ್ಕೊತ್ತಿದ್ದು, ನಾವಿಬ್ರು ಸೇರಿ ನಮ್ PE ಟೀಚರ್ ಗೆ ಬೈತಿದ್ದಿದ್ದು, drama ಮಾಡಿದ್ದು, ಡಾನ್ಸ್ ಮಾಡಿದ್ದು, ಕಿತ್ತಾಡಿದ್ದು, ಅವ್ಳು ನಂಗೆ ಅವ್ರ ಮನೆಗ್ ಕರ್ಕೊಂಡ್ ಹೋಗಿ ಉಟ ಮಾಡ್ಸಿದ್ದು ........ಎಲ್ಲ ನೆನಸ್ಕೊಂಡ್ರೆ ಇವಾಗ ನಗು ಬರತ್ತೆ.....:)  ಆಮೇಲೆ high ಸ್ಕೂಲ್.....ನಂದು ಹುಡುಗಿಯರ ಸ್ಕೂಲ್....ನಮ್ಮದೇ ದರಬಾರು... ಅಲ್ಲಿ ನಮ್ಮದೇ ಒಂದು ಗ್ಯಾಂಗ್ ....ನಾನು, ಪ್ರಿಯಾ, ಸ್ಮಿತಾ, ಶಾಹಿದ, ಗೀತಾ, ಮನಿಷ, ರೂಪಶ್ರೀ...............ಅದ್ರಲ್ಲಿ  ಪ್ರಿಯಾ was my best friend ....ಅವಳೂ ಎಲ್ಲಿದಾಳೆ ಅಂತ ಗೊತ್ತಿಲ್ಲಾ.....:(  ಕಳೆದುಹೊಗಿರೋ ಎಲ್ಲರನ್ನು ಹುಡ್ಕೋ ಪ್ರಯತ್ನ ಮಾಡ್ತಾ ಇದೀನಿ......ನೋಡ್ಬೇಕು ಯಾವಾಗ ಸಿಕ್ತಾರೆ ಅಂತ.....

ನನ್ ಕಾಲೇಜ್ ಫ್ರೆಂಡ್ಸ್ ಬಗ್ಗೆ ಬರಿಯೋಕೆ ಹೋದ್ರೆ ಟೈಮ್ ಸಾಲಲ್ಲ.....ಅವರೆಲ್ಲ ಇವಾಗ್ಲು ನನ್ ಜೊತೆ ಇದಾರೆ..ಮುರಳಿ, ಅಜಯ್,ಮಾರ್ಗರೆಟ್, ಸುಮಿತ್ರ,ನೂತನ್,ಪಲ್ಲವಿ, ಸಂತೋಷಿ, ವಿಷು, ಮಹಮ್ಮೊದ್, ಆಶಾ, ರಶ್ಮಿ, ನೀಲು, ರೇಖಾ, ರಾಜೇಶ್, ಪ್ರೇಮ,ಗುರು, ಸಾಹಿತಿ, ಜಯ, ಸುಜ, ಪೂರ್ಣಿಮಾ, ......................ಇನ್ನು ಇದೆ ಹೆಸರುಗಳು......

 ಕೆಲವೊಂದು ತುಂಬಾ ಸ್ಪೆಷಲ್ ಫ್ರೆಂಡ್ಸ್ ಬಗ್ಗೆ ಕೂಡ ಬರೀಬೇಕು.......ಕಾಲೇಜ್ ಡೇಸ್ ಅಲ್ಲಿ ನಡೆದಿರೋ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲೇಬೇಕು.......ಅದನ್ನ next  ಪೋಸ್ಟ್ ಅಲ್ಲಿ ಬರೀತೀನಿ......:)



ರಾಜಿ