ಸ್ನೇಹ ಅನ್ನೋದು ಎಸ್ಟೊಂದು ಪವಿತ್ರ ಸಂಬಂಧ ಅಲ್ವ? ನಂಗಂತೂ ಜಗತ್ತಲ್ಲಿ ಎಲ್ರಿಗಿಂತ ಒಳ್ಳೆ ಫ್ರೆಂಡ್ಸ್ ಸಿಕ್ಕಿದ್ದಾರೆ...ಯಾಕೋ ಇವತ್ತು ನನ್ ಎಲ್ಲ ಫ್ರೆಂಡ್ಸ್ ಬಗ್ಗೆ ಬರೀಬೇಕು ಅನ್ಸಿದೆ....ನಾನ್ primary ಸ್ಕೂಲ್ ಅಲ್ಲಿ ಇದ್ದಾಗ ಜ್ಯೋತಿ ಅಂತ ಒಂದು ಫ್ರೆಂಡ್ ಇದ್ಲು...but ಇವಾಗ ಅವ್ಳು ಎಲ್ಲಿ ಇದಾಳೋ ಗೊತ್ತಿಲ್ಲ....ನಾವು ಮಾಡಿದ ಕಾರಸ್ತಾನಗಳು ಇವಾಗಲು ನೆನಪಿದೆ......ನಾವಿಬ್ರು ಅಕ್ಕ ಪಕ್ಕ ಕುತ್ಕೊತಿದ್ದಿದ್ದು, ಅವ್ಳು ನಂಗೆ ಹೂ ತಂಡ್ಕೊತ್ತಿದ್ದು, ನಾವಿಬ್ರು ಸೇರಿ ನಮ್ PE ಟೀಚರ್ ಗೆ ಬೈತಿದ್ದಿದ್ದು, drama ಮಾಡಿದ್ದು, ಡಾನ್ಸ್ ಮಾಡಿದ್ದು, ಕಿತ್ತಾಡಿದ್ದು, ಅವ್ಳು ನಂಗೆ ಅವ್ರ ಮನೆಗ್ ಕರ್ಕೊಂಡ್ ಹೋಗಿ ಉಟ ಮಾಡ್ಸಿದ್ದು ........ಎಲ್ಲ ನೆನಸ್ಕೊಂಡ್ರೆ ಇವಾಗ ನಗು ಬರತ್ತೆ.....:) ಆಮೇಲೆ high ಸ್ಕೂಲ್.....ನಂದು ಹುಡುಗಿಯರ ಸ್ಕೂಲ್....ನಮ್ಮದೇ ದರಬಾರು... ಅಲ್ಲಿ ನಮ್ಮದೇ ಒಂದು ಗ್ಯಾಂಗ್ ....ನಾನು, ಪ್ರಿಯಾ, ಸ್ಮಿತಾ, ಶಾಹಿದ, ಗೀತಾ, ಮನಿಷ, ರೂಪಶ್ರೀ...............ಅದ್ರಲ್ಲಿ ಪ್ರಿಯಾ was my best friend ....ಅವಳೂ ಎಲ್ಲಿದಾಳೆ ಅಂತ ಗೊತ್ತಿಲ್ಲಾ.....:( ಕಳೆದುಹೊಗಿರೋ ಎಲ್ಲರನ್ನು ಹುಡ್ಕೋ ಪ್ರಯತ್ನ ಮಾಡ್ತಾ ಇದೀನಿ......ನೋಡ್ಬೇಕು ಯಾವಾಗ ಸಿಕ್ತಾರೆ ಅಂತ.....
ನನ್ ಕಾಲೇಜ್ ಫ್ರೆಂಡ್ಸ್ ಬಗ್ಗೆ ಬರಿಯೋಕೆ ಹೋದ್ರೆ ಟೈಮ್ ಸಾಲಲ್ಲ.....ಅವರೆಲ್ಲ ಇವಾಗ್ಲು ನನ್ ಜೊತೆ ಇದಾರೆ..ಮುರಳಿ, ಅಜಯ್,ಮಾರ್ಗರೆಟ್, ಸುಮಿತ್ರ,ನೂತನ್,ಪಲ್ಲವಿ, ಸಂತೋಷಿ, ವಿಷು, ಮಹಮ್ಮೊದ್, ಆಶಾ, ರಶ್ಮಿ, ನೀಲು, ರೇಖಾ, ರಾಜೇಶ್, ಪ್ರೇಮ,ಗುರು, ಸಾಹಿತಿ, ಜಯ, ಸುಜ, ಪೂರ್ಣಿಮಾ, ......................ಇನ್ನು ಇದೆ ಹೆಸರುಗಳು......
ಕೆಲವೊಂದು ತುಂಬಾ ಸ್ಪೆಷಲ್ ಫ್ರೆಂಡ್ಸ್ ಬಗ್ಗೆ ಕೂಡ ಬರೀಬೇಕು.......ಕಾಲೇಜ್ ಡೇಸ್ ಅಲ್ಲಿ ನಡೆದಿರೋ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲೇಬೇಕು.......ಅದನ್ನ next ಪೋಸ್ಟ್ ಅಲ್ಲಿ ಬರೀತೀನಿ......:)
ರಾಜಿ
Saturday, September 4, 2010
Tuesday, August 31, 2010
ಮಳೆಯಲಿ ಜೊತೆಯಲಿ.....:)
Posted by
Raaji (ರಾಜಿ)
ನಿನ್ನೆ question bank , ಅದು ಇದು ಅಂತ ಕಾಲೇಜಿನ ಕೆಲಸ ಮುಗಿಸಿ ಮನೆಗೆ ಹೊರಡೋವಾಗ ೫ ಗಂಟೆ.......ಮೊದಲೇ ಬೆಳಿಗ್ಗೆಯಿಂದ ಕೆಲಸ ಮಾಡಿ ಮನೆಗೆ ಹೋಗಿ ಮುಟ್ಟಿದರೆ ಸಾಕಪ್ಪ ಅನ್ನೋ ಭಾವ ....ಅದ್ರಲ್ಲಿ ಕಾಲೇಜಿನ ಗೇಟ್ ಇಂದ ಆಚೆ ಬರೋದಕ್ಕೂ ಮಳೆ ಧೋ ಅಂತ ಸುರಿಯೋದಕ್ಕು ಸರಿ ಹೋಯ್ತು...ಇನ್ನೇನು ಮಳೆ ಬೀಳ್ತಿದೆಯಲ್ಲ , ನಡ್ಕೊಂಡು ಹೋಗೋಕೆ ಕಷ್ಟ ಅಂತ ಆಟೋ ಗೆ ಕಾಯ್ತಾ ಇದ್ದೆ......ಅಂತು ಇಂತೂ ಸ್ವಲ್ಪ ಹೊತ್ತು ಕಾದ ಮೇಲೆ ಒಂದು ಆಟೋ ಸಿಕ್ತು.........ಇನ್ನೂ ಮಳೆ ಸುರಿತಾನೆ ಇತ್ತು....ಆಟೋ ಸಿಕ್ಕ ಖುಷಿಲಿ ಹತ್ತಿ ಕುಳಿತೆ.....ಮಳೆಲಿ ನಾನು ನೆನಿಬಾರದು ಅಂತ ಕಷ್ಟ ಪಟ್ಟು ಆಟೋ ಹತ್ತಿ ಕುತ್ಕೊಂಡ್ರೆ, ಸ್ವಲ್ಪಾನೆ ಹೊತ್ತಲ್ಲಿ ಆ ಆಟೋ ಕೂಡ ಸೋರೋಕೆ ಶುರು ಆಗಬೇಕಾ? ಕರೆಕ್ಟ್ ಆಗಿ ತಲೆ ಮೇಲೆ ಸೋರೋಕೆ ಶುರು ಆಯಿತು.....ಎರಡು ಬಾಗಿಲಿಂದ ಮಳೆ ರಾಯ ಒಳಗೆ ಬರ್ತಾ ಇತ್ತು.....ಮೊದ್ಲೇ ಕೆಲಸ ಮಾಡಿ ಸುಸ್ತಾಗಿತ್ತು.....ಆಟೋ ಬೇರೆ ಸೋರುತ್ತ ಇತ್ತು...ಆ ಸಿಟ್ಟನ್ನ ಆಟೋದವನ ಮೇಲೆ ತೋರ್ಸಿದ್ರೆ ಅವ್ನು ಪಾಪ "ಏನ್ ಮಾಡೋದು ಮೇಡಂ " ಅಂತ ಅನ್ನಬೇಕ? ಅಂತು ಇಂತೂ traffic ಜಾಮ್ ಅಲ್ಲಿ ಸಿಕ್ಕು ಮನೆಗೆ ಹೋಗೋ ಹೊತ್ತಿಗೆ ೬.೧೫...ಆಟೋ ಇಂದ ಇಳಿದ ತಕ್ಷಣ ಗೊತ್ತಾಯ್ತು ನಾನು ಫುಲ್ ನೆನೆದೊಗಿದಿನಿ ಅಂತ........ಆಮೇಲೆ ಅನ್ಸ್ತು ಆಟೋನಲ್ಲಿ ಬರೋದಕ್ಕಿಂತ ನಡ್ಕೊಂಡೆ ಬಂದಿದ್ರೆ at least "ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು......." ಅಂತ ಹಾಡ್ಕೊಂಡು ಬರಬಹುದಿತ್ತು ಅಂತ........:)
Friday, August 13, 2010
ಯಾಕೋ ಬೇಜಾರು..........:)
Posted by
Raaji (ರಾಜಿ)
ತುಂಬಾ ದಿನಗಳ ನಂತರ ಬರೀತಾ ಇದೀನಿ....ಏನ್ ಬರಿಲಿ ಯಾವುದರ ಬಗ್ಗೆ ಬರಿಲಿ ಅಂತ ಗೊತ್ತಾಗ್ತಿಲ್ಲ..ಯಾವಾಗ್ಲೂ ಖುಷಿಯಾಗಿರೋ ನನಗೆ ಇವತ್ತು ಒಂತರಾ ಬೇಜಾರು.....ಯಾಕೆ ಏನು ಗೊತ್ತಿಲ್ಲ.....ಕೆಲವೊಮ್ಮೆ ವಿನಾಕಾರಣ ಈ ರೀತಿ ಬೇಜಾರಾಗತ್ತೆ ಅಂತ ಕೇಳಿದೀನಿ.....ಯಾವಾಗಲೂ ಕೆಲಸದಲ್ಲಿ ಮುಳುಗಿರೋ ನಂಗೆ ಒಂದು ಬ್ರೇಕ್ ಬೇಕು ಅಂತ ಅನಿಸುತ್ತಿದೆ....ಆದ್ರೆ ಇವಾಗಿರೊ ವರ್ಕ್ pressure ಅಲ್ಲಿ ಬ್ರೇಕ್ ತಗೋಳೋದು ಕನಸಿನ ಮಾತು......ಇದ್ದಿದ್ರಲ್ಲಿ ಖುಷಿ ಕೊಡೊ ಸಂಗತಿ ಅಂದ್ರೆ ನನ್ ತಮ್ಮ ಕೂಡ ಓದೋಕೆ ಅಂತ ಇಲ್ಲಿಗೆ ಬರ್ತಿದಾನೆ......ಅದ್ಕೆ ಫುಲ್ ಖುಷಿಯಾಗಿದಿನಿ...:) .....MSc in Multimedia and Animation ಕೋರ್ಸ್ ಗೆ admission ಸಿಕ್ಕಿದೆ.......ಅವನದೇ ಆದ ನೂರಾರು ಕನಸುಗಳ ಜೊತೆಗೆ ಮಾಯಾ ನಗರಿ ಬೆಂಗಳೂರಿಗೆ ಬರ್ತಿದಾನೆ....ಅವ್ನ ಎಲ್ಲ ಕನಸು ನನಸಾಗಲಿ ಅನ್ನೋದು ನನ್ನ ಹಾರೈಕೆ ......:)
Monday, July 12, 2010
Out Bounding Training With MA students.............
Posted by
Raaji (ರಾಜಿ)
ಹೋದ ಮಂಗಳವಾರ ನಮ್ಮ M A students ಜೊತೆ out bounding training ಗೆ ಹೋಗಿದ್ದೆ..... ಸಖತ್ experience .....ನಾವ್ ಹೋಗಿದ್ದು ಸೋಮನಹಳ್ಳಿ.........ನಟರಾಜ್ ಗುರುಕುಲಕ್ಕೆ.......ಕಾಡಿನ ಮಧ್ಯ ಇರೋ ಆ ಗುರುಕುಲ ನೋಡೋಕೆ ಚಂದ ....ಅದನ್ನ ನಾನ್ ಹೇಳೋದಕ್ಕಿಂತ ನೀವ್ ನೋಡಿಬಂದ್ರೆನೆ ಸರಿ.........ಅಲ್ಲಿ ಎರಡು ದಿನಗಳ ವಾಸ.......ಟೆಂಟಲ್ಲಿ.....ಫಸ್ಟ್ ದಿನ ಹೋದ ತಕ್ಷಣ ಇದೆಲ್ಲಿ ತಂದು ಬಿಟ್ಟಿದಾರೋ ಅನ್ನೋ ಭಾವ......ಸ್ವಲ್ಪ ಹೊತ್ತಿನ ನಂತರ ಆ ಪರಿಸರಕ್ಕೆ ಅಡ್ಜಸ್ಟ್ ಆದ್ವಿ ಅನ್ನೋದು ಬೇರೆ ಮಾತು.......:) ನಂಗೆ ಕೊಟ್ಟಿದ್ದ ಟೆಂಟ್ ಎಷ್ಟ್ ಚೆನ್ನಾಗಿತ್ತಂದ್ರೆ ಅದ್ನ ಬಿಟ್ಟು ಬರೋವಾಗ ಒಂತರಾ ಬೇಜಾರಾಯ್ತು....ಹೋಗಿದ್ದ ದಿನಾನೆ ಒಂದು ಬೆಟ್ಟ ಹತ್ತೋಕೆ ಕರ್ಕೊಂಡು ಹೋದರು...ಇವೆಲ್ಲ ನನ್ students ಗೆ ಹೊಸ experience ......ಬೆಟ್ಟದ ತುದಿಯಿಂದ ಬೆಂಗಳೂರು ನೋಡೋದೇ ಒಂದು ಖುಷಿ...ಅಲ್ಲಿಂದ ವಾಪಸ್ ಬಂದಮೇಲೆ ಅಚ್ಚ ಕನ್ನಡದ ಶೈಲಿಯಲ್ಲಿ ಒಂದು ಊಟ.....ಆಮೇಲೆ ಎಲ್ಲರು ಅವರವರ ಟೆಂಟ್ ಗೆ ವಾಪಸ್.......ಫುಲ್ ಚಳಿ ಚಳಿ weather ......ಸುತ್ತಲು ಕಾಡು.......ಭಯ ಆಗಿದ್ದು ಸುಳ್ಳಲ್ಲ....ಮತ್ತೆ ಮಂಗಳವಾರ ಬೆಳಿಗ್ಗೆ ೬ ಗಂಟೆಗೆ reporting ಟೈಮ್......ನಮ್ students ಗೆ ಅಷ್ಟು ಬೆಳಿಗ್ಗೆ ಎದ್ದೆ ಗೊತ್ತಿಲ್ಲ ಅನ್ಸತ್ತೆ.....ಅಂತು ಇಂತೂ ಎದ್ದು ೬ ಗಂಟೆಗೆ ಗ್ರೌಂಡ್ ಅಲ್ಲಿ ಹಾಜರು.....ಅಲ್ಲಿ ನೋಡಬೇಕಿತ್ತು ಮಜಾ......ಫುಲ್ ಮಿಲಿಟರಿ ಟ್ರೇನಿಂಗ.......ಅಲ್ಲಿಗೆ ಮಕ್ಕಳೆಲ್ಲ ಫುಲ್ ಸುಸ್ತು....:) ೮ ಗಂಟೆಗೆ ಸೂಪರ್ ಆಗಿರೋ ತಿಂಡಿ......ಆಮೇಲೆ ಟ್ರೆಕ್ಕಿಂಗ್ .........ಅಲ್ಲಿಂದ ವಾಪಸ್ ಬರೊ ಹೊತ್ತಿಗೆ ೧ ಗಂಟೆ....ಬಂದು ಊಟ ಮಾಡಿ ರೆಸ್ಟ್ ತಗೊಂಡಿದ್ದಾಯ್ತು..........೭ ಗಂಟೆಗೆ ಕ್ಯಾಂಪ್ fire ........students ಎಲ್ಲ cultural activities ಮಾಡಿದ್ರು....ಏನ್ talents ಅಂತಿರ... ಆಮೇಲೆ ಮತ್ತೆ ಊಟ .....ಅಲ್ಲಿಗೆ ಮಂಗಳವಾರ ಮುಗಿತು......ಬುಧವಾರದ experience ಮಾತ್ರ ಸ್ಪೆಷಲ್ experience ......ಅದ್ನ next ಪೋಸ್ಟ್ ಅಲ್ಲಿ ಬರೀತೀನಿ.........photos ಕೂಡ ಹಾಕ್ತೀನಿ......ನೋಡಿ ....opinion ತಿಳ್ಸಿ...k ನಾ???????
ರಾಜಿ
ರಾಜಿ
Thursday, June 17, 2010
ಮೊದಲ ದಿನ.......
Posted by
Raaji (ರಾಜಿ)
ಏನ್ ಗೊತ್ತಾ? ಇವತ್ತು ಬೆಳಿಗ್ಗೆ B .Com 1st sem ಗೆ ಬಿಸಿನೆಸ್ ಎಕಾನೋಮಿಕ್ಸ್ ಹೇಳೋಕೆ ಹೋಗಿದ್ದೆ....ತುಂಬಾ Naughty ಹುಡುಗರು.....:) specially ಲಾಸ್ಟ್ ಬೆಂಚ್ ಅಲ್ಲಿ ಕುತ್ಕೊಳೋರು.....ಇವಾಗಷ್ಟೇ PU ಮುಗಿಸಿ ಫುಲ್ ಜೋಶ್ ಅಲ್ಲಿ ಬಂದಿದಾರೆ...ಇನ್ನು ಇಲ್ಲಿ atmosphere ಗೆ ಅಡ್ಜಸ್ಟ್ ಆಗಿಲ್ಲ ....ಕ್ಲಾಸ್ ಕೇಳೋಕೆ mooD ಇಲ್ಲ...:) ನಂದು ಇವತ್ತು introductory ಕ್ಲಾಸ್...ಸುಮ್ನೆ economics ಬಗ್ಗೆ ಏನ್ ಗೊತ್ತಿದೆ ಅಂತ ಕೇಳ್ದೆ.......ಅವರ answers ಕೇಳಿ ಫುಲ್ ಸುಸ್ತು.....they are so intelligent ......and i m very proud to have such a wonderful students .....:) ಕ್ಲಾಸ್ ಮುಗಿಸಿ ಆಚೆ ಬರ್ತಾ ಇದ್ದೆ .....ಒಂದ್ ಹುಡುಗಿ ನನ್ ಹಿಂದೇನೆ ಬಂದಳು.....ಏನು ಅಂತ ತಿರುಗಿ ನೋಡಿದೆ...ಅವ್ಳು ಹೇಳಿದ್ದು ಒಂದೇ word ........Madam u r very sweet ......:) ಸದ್ಯ ಇವಾಗ ನಾನು ಭೂಮಿ ಮೇಲೆ ಇಲ್ಲಾ....:)
ಹಾಡು ಹಾಡ್ತಿದಿನಿ....." ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ" ಅಂತ....
ಹಾಡು ಹಾಡ್ತಿದಿನಿ....." ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ" ಅಂತ....
Friday, June 11, 2010
.........
Posted by
Raaji (ರಾಜಿ)
ತುಂಬಾ ದಿನಗಳ ನಂತರ ಬರಿತ ಇದೀನಿ...ಏನ್ ಬರಿಲಿ ಹೇಗೆ ಬರಿಲಿ ಗೊತ್ತಾಗ್ತಾ ಇಲ್ಲ...:)
ಇತ್ತೀಚಿಗೆ ಬ್ಲಾಗ್ ಅಲ್ಲಿ ಏನಾದ್ರು ಬರಿಯೋಣ ಅಂದ್ರೆ ಟೈಮ್ ಸಿಕ್ತಾನೆ ಇಲ್ಲ.....ಅಷ್ಟೊಂದು ಬ್ಯುಸಿ ಆಗಿದಿನಿ.....ದಿನ ಕ್ಲಾಸ್ ಗೆ prepare ಆಗಬೇಕು..ಅದು ೨-೩ ವಿಷಯ...ಬೆಳಿಗ್ಗೆ ಕಾಲೇಜ್ ಗೆ ಬಂದರೆ ಹೇಗೆ ಟೈಮ್ ಹೋಗತ್ತೆ ಅಂತಾನೆ ಗೊತ್ತಾಗಲ್ಲ...ಫಸ್ಟ್ ಟೈಮ್ join ಆಗಬೇಕಾದರೆ ಎಷ್ಟು ಭಯ ಪಟ್ಟಿದ್ದೆ .....ಹೊಸ ಕಾಲೇಜ್ ......students ಹೇಗಿರ್ತಾರೋ ಏನೋ ಅಂತ.....ಅದೇ ಭಯದಲ್ಲಿ ಜೂನ್ ೧ ಗೆ ಬಂದು join ಆದೆ....ಫಸ್ಟ್ ಡೇ experience ಮಾತ್ರ ಸೂಪರ್....ಜಗತ್ತಲ್ಲಿ The Best Profession ಅಂದ್ರೆ teaching profession .........ಈ ಕೆಲಸದಲ್ಲಿರೋ ಮಜಾ ಬೇರೆ ಯಾವ profession ಅಲ್ಲೂ ಇಲ್ಲ ಅನ್ಕೊತಿನಿ...:) ಇನ್ನು ನನ್ students ಬಗ್ಗೆ ಹೇಳೋಕ್ ಹೋದ್ರೆ ಜಾಗ ಸಾಲೋದಿಲ್ಲ...ಅದನ್ನ next ಪೋಸ್ಟ್ ಅಲ್ಲಿ ಬರೀತೀನಿ...ಕ್ಲಾಸ್ ಗೆ ಟೈಮ್ ಆಯಿತು...ಬರ್ಲಾ????.....:)
ಇತ್ತೀಚಿಗೆ ಬ್ಲಾಗ್ ಅಲ್ಲಿ ಏನಾದ್ರು ಬರಿಯೋಣ ಅಂದ್ರೆ ಟೈಮ್ ಸಿಕ್ತಾನೆ ಇಲ್ಲ.....ಅಷ್ಟೊಂದು ಬ್ಯುಸಿ ಆಗಿದಿನಿ.....ದಿನ ಕ್ಲಾಸ್ ಗೆ prepare ಆಗಬೇಕು..ಅದು ೨-೩ ವಿಷಯ...ಬೆಳಿಗ್ಗೆ ಕಾಲೇಜ್ ಗೆ ಬಂದರೆ ಹೇಗೆ ಟೈಮ್ ಹೋಗತ್ತೆ ಅಂತಾನೆ ಗೊತ್ತಾಗಲ್ಲ...ಫಸ್ಟ್ ಟೈಮ್ join ಆಗಬೇಕಾದರೆ ಎಷ್ಟು ಭಯ ಪಟ್ಟಿದ್ದೆ .....ಹೊಸ ಕಾಲೇಜ್ ......students ಹೇಗಿರ್ತಾರೋ ಏನೋ ಅಂತ.....ಅದೇ ಭಯದಲ್ಲಿ ಜೂನ್ ೧ ಗೆ ಬಂದು join ಆದೆ....ಫಸ್ಟ್ ಡೇ experience ಮಾತ್ರ ಸೂಪರ್....ಜಗತ್ತಲ್ಲಿ The Best Profession ಅಂದ್ರೆ teaching profession .........ಈ ಕೆಲಸದಲ್ಲಿರೋ ಮಜಾ ಬೇರೆ ಯಾವ profession ಅಲ್ಲೂ ಇಲ್ಲ ಅನ್ಕೊತಿನಿ...:) ಇನ್ನು ನನ್ students ಬಗ್ಗೆ ಹೇಳೋಕ್ ಹೋದ್ರೆ ಜಾಗ ಸಾಲೋದಿಲ್ಲ...ಅದನ್ನ next ಪೋಸ್ಟ್ ಅಲ್ಲಿ ಬರೀತೀನಿ...ಕ್ಲಾಸ್ ಗೆ ಟೈಮ್ ಆಯಿತು...ಬರ್ಲಾ????.....:)
Sunday, May 9, 2010
ಅಮ್ಮ ಅಂದರೆ.........
Posted by
Raaji (ರಾಜಿ)
First of all Happy Mother's Day ಅಮ್ಮ....
ಅಮ್ಮ ಅಂದ ತಕ್ಷಣ ನೆನಪಾಗೋದು ಕೈ ತುತ್ತು......ಹಾಗೆ ಅದರ ಜೊತೆ ನೆನಪಾಗೋದು ಚಮ್ ಚಮ್ ಚಡಿ ಏಟು...:)
ಆವತ್ತೇನಾದ್ರು ನಮ್ ಅಮ್ಮ ಚಡಿ ಏಟು ಕೊಟ್ಟಿರಲಿಲ್ಲಾ ಅಂದ್ರೆ ಇವತ್ತು ನಾನ್ ಏನಾಗಿರ್ತಿದ್ದೆ ಅಂತಾ ಊಹಿಸೋದು ಕಷ್ಟ..... ಯಾಕೆ ಅಂದ್ರೆ ಚಿಕ್ಕೋಳಿದ್ದಾಗ ಎಷ್ಟೊಂದು ತರ್ಲೆ ಕೆಲಸ ಮಾಡ್ತಿದ್ದೆ ಅಂದ್ರೆ ಹೇಳಿದ್ರೆ ನೀವ್ ನಂಬಲ್ಲಾ...:) ಅಮ್ಮ ಚಡಿ ಹಿಡ್ಕೊಂಡಾಗ್ಲೆ ನಾವ್ ಓದೋಕ್ ಕೂತ್ಕೊತ್ತಿದ್ದಿದ್ದು...ಆವತ್ತು ಅಮ್ಮ ಕೋಲ್ ಹಿಡ್ಕೊಂಡು ಓದ್ಸಿರ್ಲಿಲ್ಲಾ ಅಂದ್ರೆ ಇವತ್ತು ನಾನ್ Ph.D ಮಾಡ್ತಾನೂ ಇರ್ಲಿಲ್ಲಾ....gold medal ತಗೋತಾನೂ ಇರ್ಲಿಲ್ಲ...ಇವತ್ತು ನಾನು ಬೆಂಗಳೂರಿನ ಪ್ರತಿಷ್ಟಿತ ಕಾಲೇಜ್ ಒಂದರಲ್ಲಿ ಲೆಕ್ಚರರ್.....ಇವತ್ತು ನಾನ್ ಈ ಲೆವಲ್ ಅಲ್ಲಿ ಇದಿನಿ ಅಂದ್ರೆ ಅದ್ಕೆ ಅಮ್ಮನೂ ಕಾರಣ....ಚಿಕ್ಕೋಳಿದ್ದಾಗ ಅಮ್ಮ ಬೆಳಿಗ್ಗೆ ೫ ಘಂಟೆಗೆ ಓದೋಕ್ ಎಬ್ಬಿಸೋರು...ನಾನ್ ನೋಡಿದ್ರೆ ಪುಸ್ತಕ ಹಿಡ್ಕೊಂಡು ಹಾಗೆ ಮಲ್ಕೊಂಡು ಬಿಡ್ತಿದ್ದೆ...ಎಷ್ಟೋ ದಿನ ರಾತ್ರಿ ನಾನ್ ಓದ್ಬೇಕಾದ್ರೆ ಅಮ್ಮಾನೂ ನನ್ ಜೊತೆ ಎಚ್ಚರ ಇರೋರು...ನಾನ್ First rank ಬಂದಾಗೆಲ್ಲಾ ನಮ್ ಅಮ್ಮ ಅವ್ರೆ rank ಬಂದಷ್ಟು ಖುಷಿ ಪಟ್ಟಿದಾರೆ.ನಂಗೆ ಹುಷಾರು ಇಲ್ದೆ ಇದ್ದಾಗೆಲ್ಲ ಎಷ್ಟೊಂದು ಸಂಕಟ ಪಟ್ಟಿದಾರೆ..ನಾನ್ ಚೆನ್ನಾಗಿ ಇರ್ಲಿ ಅಂತಾ ಎಷ್ಟೋ ದೇವ್ರಿಗೆ ಹರಕೆ ಹೊತ್ಕೊಂಡಿದಾರೆ...ನಾನ್ ಖುಷಿ ಪಟ್ಟಾಗೆಲ್ಲ ಅವ್ರೂ ಖುಷಿ ಪಟ್ಟಿದಾರೆ..ನನ್ ಕಣ್ಣಲ್ಲಿ ನೀರು ಕಂಡಾಗ ಅವ್ರೂ ಅತ್ತಿದಾರೆ......ಅದೆಲ್ಲಾ ಇನ್ನೂ ಕಣ್ಣ ಮುಂದೆ ಹಾಗೆ ಇದೆ...ಒಂದೊಂದ್ ಸಾರಿ ಎಷ್ಟು ಬೇಗ ದೊಡ್ಡೋಳಾಗ್ಬಿಟ್ಟೆ ಅಂತ ಅನ್ನಿಸತ್ತೆ.....ಆದ್ರೆ ಇವತ್ತೂ ನಮ್ ಅಮ್ಮಂಗೆ ನಾನ್ ಚಿಕ್ಕ ಹುಡ್ಗೀನೆ...ಇವತ್ತು ನಮ್ ಅಮ್ಮ ನಂಗೆ ಕೈ ತುತ್ತು ಕೊಡ್ತಾರೆ....:) ಅದ್ರಲ್ಲಿ ಇರೊ ಮಜಾ ಬೇರೆ ಯಾವುದರಲ್ಲೂ ಇಲ್ಲಾ...:) ಇವತ್ತಿಗೂ ಅಷ್ಟೆ ಅಮ್ಮಂಗೆ ನಾನ್ ಅಂದ್ರೆ ಪ್ರಾಣ.......:) ಅದ್ಕೆ ದೊಡ್ಡೋರು ಹೇಳೋದು ಅಮ್ಮನ ಪ್ರೀತಿ ಮುಂದೆ ಯಾವುದು ಇಲ್ಲಾ ಅಂತ......
LOVE U MOM..
Subscribe to:
Posts (Atom)